ETV Bharat / state

ಸುಸಜ್ಜಿತ ರಸ್ತೆ ಜೊತೆಗೆ ಬೇಕಿದೆ ಸುರಕ್ಷಿತ ಪಾದಚಾರಿ ಮಾರ್ಗ; ಅಪಘಾತಗಳ ನಿಯಂತ್ರಣಕ್ಕೆ ಇದೊಂದೇ ದಾರಿ - footpath yo avoid accidents

2020ರಲ್ಲಿ 20 ಪುರುಷರು ಹಾಗೂ ಐವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 71 ಪುರುಷರು ಗಾಯಗೊಂಡಿದ್ದು, 14 ಮಹಿಳೆಯರು ಗಾಯಗೊಂಡಿದ್ದಾರೆ. ಅಪಘಾತಗಳ ನಿಯಂತ್ರಣಕ್ಕೆ ಪಾದಚಾರಿ ಮಾರ್ಗ ನಿರ್ಮಾಣವೊಂದೇ ಪರಿಹಾರ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

footpath is only suggestion to avoid road accident at belgavi
ಸುಸಜ್ಜಿತ ರಸ್ತೆ ಜೊತೆಗೆ ಬೇಕಿದೆ ಸುರಕ್ಷಿತ ಪಾದಚಾರಿ ಮಾರ್ಗ; ಅಪಘಾತಗಳ ನಿಯಂತ್ರಣಕ್ಕೆ ಇದೊಂದೇ ದಾರಿ
author img

By

Published : Feb 23, 2021, 5:43 PM IST

ಬೆಳಗಾವಿ: ಸುಸಜ್ಜಿತ ರಸ್ತೆ ಜೊತೆಗೆ ಸುರಕ್ಷಿತ ಪಾದಚಾರಿ ಮಾರ್ಗವೂ ಅತ್ಯವಶ್ಯಕ. ಸೂಕ್ತ ಮತ್ತು ಸುರಕ್ಷತಾ ಪಾದಚಾರಿ ಮಾರ್ಗಗಳಿಲ್ಲದಿದ್ದರೆ ಪಾದಚಾರಿಗಳು ಸಂಚರಿಸುವುದಾದರೂ ಹೇಗೆ ? ಕುಂದಾನಗರಿ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿದೆಯಾದರೂ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗಗಳಿಲ್ಲ. ಜೊತೆಗೆ ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಪಾದಚಾರಿಗಳೇನಾದ್ರೂ ಜಾಗೃತಿ ತಪ್ಪಿದ್ರೆ ಇಲ್ಲಿ ಅಪಘಾತಕ್ಕೀಡಾಗಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪಘಾತಗಳ ನಿಯಂತ್ರಣಕ್ಕೆ ನಿರ್ಮಾಣಗೊಳ್ಳಬೇಕಿದೆ ಪಾದಚಾರಿ ಮಾರ್ಗ

2020ರಲ್ಲಿ 25 ಪಾದಚಾರಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು 85ಕ್ಕೂ ಅಧಿಕ ಮಂದಿ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಸುಸಜ್ಜಿತ ಪಾದಚಾರಿ ಮಾರ್ಗಗಳು ಇಲ್ಲದೇ ಇರುವುದು ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಸ್ಮಾರ್ಟ್‍ಸಿಟಿ ಯೋಜನೆ:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‍ಸಿಟಿ ಯೋಜನೆಗೆ ಬೆಳಗಾವಿ ಮೊದಲನೇ ಹಂತದಲ್ಲೇ ಆಯ್ಕೆಯಾಗಿದೆ. ನಗರದ ಎಲ್ಲೆಡೆ ಸ್ಮಾರ್ಟ್‍ಸಿಟಿ ಕಾಮಗಾರಿಯು ತ್ವರಿತಗತಿಯಿಂದ ಸಾಗುತ್ತಿದೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆಯ ಬದಿಯಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತಿದ್ದು, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಯಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದು ಕೂಡ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ರಸ್ತೆ ದಾಟುವಾಗ ಅಪಘಾತ:

ನಗರದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ರಸ್ತೆಗಳನ್ನು ಒನ್‍ವೇ ಮಾಡಲಾಗಿದೆ. ಹೀಗಾಗಿ ರಸ್ತೆ ದಾಟುವಾಗ ಹಾಗೂ ಕ್ರಾಸ್ ಮಾಡುವಾಗ ಜನರು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ. ಬೆಳಗಾವಿಯಲ್ಲಿ ಕಳೆದ ವರ್ಷ ಮೃತಪಟ್ಟ ಬಹುತೇಕರು ರಸ್ತೆ ದಾಟುವಾಗಲೇ ಅಪಘಾತಕ್ಕೀಡಾಗಿದ್ದಾರೆ. 20 ಪುರುಷರು ಹಾಗೂ ಐವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 71 ಪುರುಷರು ಗಾಯಗೊಂಡಿದ್ದು, 14 ಮಹಿಳೆಯರು ಗಾಯಗೊಂಡಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಸಂಚಾರ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿ ಅಪಘಾತಗಳ ಪ್ರಮಾಣ ಮಾತ್ರ ನಿಂತಿಲ್ಲ. ಇನ್ನು ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡುವ ಸವಾರರೂ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಡೇಂಜರ್ ರಸ್ತೆಗಳಿವು:

ಬೆಳಗಾವಿ ಮಹಾನಗರದ ಈ ರಸ್ತೆಗಳು ಡೇಂಜರ್ ರಸ್ತೆಗಳಾಗಿವೆ. ಚೆನ್ನಮ್ಮ ವೃತ್ತದಿಂದ ಬಸವೇಶ್ವರ ವೃತ್ತದ ರಸ್ತೆ, ಚೆನ್ನಮ್ಮ ವೃತ್ತದಿಂದ ಕೆಎಲ್‍ಇ ಸಂಪರ್ಕಿಸುವ ರಸ್ತೆ, ಚೆನ್ನಮ್ಮ ವೃತ್ತದಿಂದ ಆರ್​ಟಿಒ ವೃತ್ತ ಹಾಗೂ ಓಲ್ಡ್ ಪಿಬಿ ರೋಡ್ ಹಾಗೂ ಆರ್​ಟಿಒ ವೃತ್ತದಿಂದ ಕೊಲ್ಲಾಪುರ ವೃತ್ತ ಸಂಪರ್ಕಿಸುವ ರಸ್ತೆ ಮತ್ತು ಖಾನಾಪುರ ರಸ್ತೆಯಲ್ಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.

ಓದಿ: ದೇಶದ ಪ್ರಮುಖ ಹಾಗೂ ಭೀಕರ ಬಸ್ ಅಪಘಾತಗಳು.. ಯಾವ ರಾಜ್ಯದಲ್ಲಿ ಎಷ್ಟು?

ಕಾಲೇಜು ರಸ್ತೆ ಹಾಗೂ ಖಾನಾಪುರ ರಸ್ತೆಯಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿವೆ. ಹೆಲ್ಮೆಟ್ ಇಲ್ಲದೇ ವಿದ್ಯಾರ್ಥಿಗಳು ಬೈಕ್ ಚಲಾಯಿಸುತ್ತಿರುವುದೇ ಹಾಗೂ ಅತಿ ವೇಗವಾಗಿ ಬೈಕ್, ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದು ಬಂದಿದೆ. ಈ ಎಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್, ರೋಡ್ ಬ್ರೇಕರ್​ ಇದ್ದರೂ ಕೂಡ ಇಲ್ಲಿ ಅಪಘಾತಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಮಹಾನಗರ ಸಂಚಾರ ಪೊಲೀಸರ ಚಿಂತೆಗೀಡಾಗುವಂತೆ ಮಾಡಿದೆ.

ಪಾದಚಾರಿ ಮಾರ್ಗ ನಿರ್ಮಾಣವೊಂದೇ ಪರಿಹಾರ:

ಸ್ಮಾರ್ಟ್‍ಸಿಟಿ ಯೋಜನೆಯಡಿ ಸುಸಜ್ಜಿತ ರಸ್ತೆಗಳ ನಿರ್ಮಾಣವಾಗಿದೆ. ಇನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲೇ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕಿದೆ. ಅಫಘಾತಗಳು ಹೆಚ್ಚಿರುವ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವುದರಿಂದಲೇ ಅಪಘಾತಗಳನ್ನು ತಡೆಯಬಹುದು. ಅಪಘಾತಗಳ ನಿಯಂತ್ರಣಕ್ಕೆ ಪಾದಚಾರಿ ಮಾರ್ಗ ನಿರ್ಮಾಣವೊಂದೇ ಪರಿಹಾರ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.