ಚಿಕ್ಕೋಡಿ: ಕಳೆದ ಎರಡ್ಮೂರು ನೆಮ್ಮದಿಯಾಗಿದ್ದ ಚಿಕ್ಕೋಡಿ ಜನತೆಯಲ್ಲಿ ಈಗ ಕೊರೊನಾ ಆತಂಕ ಶುರುವಾಗಿದೆ.
ಚಿಕ್ಕೋಡಿಯ ಜಾರಿಗಲ್ಲಿ ಏರಿಯಾ ಹಾಗೂ ನಣದಿವಾಡಿಯ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು ಐದು ಕೊರೊನಾ ಪಾಸಿಟಿವ್ ಬಂದಿದ್ದು, ಜನತೆಯಲ್ಲಿ ಭೀತಿ ಹೆಚ್ಚಾಗಿದೆ.