ETV Bharat / state

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ....

ಬೆಳಗಾವಿ ನಗರದ ಹಳೇ ಪಿಬಿ ರೋಡ್‍ನ ಶಾಹಪುರದ ಖಾಸಬಾಗ್‍ ಜಯವಂತಿ ಮಂಗಲ ಕಾರ್ಯಾಲಯದ ಎದುರಿನ ಪ್ರಾರ್ಥನಾ ಸ್ಥಳದ ಮುಂದೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ.

author img

By

Published : Nov 22, 2020, 9:06 PM IST

Updated : Nov 22, 2020, 10:36 PM IST

belagavi
ಕಲ್ಲು ತೂರಾಟ

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ನಗರದ ಹಳೇ ಪಿಬಿ ರೋಡ್‍ನ ಶಾಹಪುರದ ಖಾಸಬಾಗ್‍ ಜಯವಂತಿ ಮಂಗಲ ಕಾರ್ಯಾಲಯದ ಎದುರಿನ ಪ್ರಾರ್ಥನಾ ಸ್ಥಳದ ಮುಂದೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿದೆ. ಈ ವೇಳೆ ಪರಸ್ಪರ ಎರಡು ಗುಂಪುಗಳ ಯುವಕರು ಕಲ್ಲು ತೂರಾಟ ನಡೆಸಿದ್ದು, ಒಂದು ಗುಂಪಿನ ಓರ್ವ ಯುವಕ ಗಾಯಗೊಂಡಿದ್ದಾನೆ ಎನ್ನಲಾಗಿದೆ‌. ತಕ್ಷಣವೇ ಸ್ಥಳಕ್ಕೆ ಶಾಹಪುರ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ್ ದೌಡಾಯಿಸಿ ಎರಡು ಗುಂಪುಗಳ ಯುವಕರನ್ನು ಅಲ್ಲಿಂದ ಚದುರಿಸಿದ್ದಾರೆ.

ಈ ವೇಳೆ ಎಸಿಪಿ ಸದಾಶಿವ ಕಟ್ಟಿಮನಿ ಕೂಡ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಮುನ್ನೆಚ್ಚರಿಕೆ ಕ್ರಮವಾಗಿ ಖಾಸಬಾಗ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Last Updated : Nov 22, 2020, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.