ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಟಿಕೆಟ್ಗಾಗಿ ಬಿಜೆಪಿಯಲ್ಲಿ ಪೈಪೋಟಿ ನಡೆದಿದೆ. ಟಿಕೆಟ್ ಆಕಾಂಕ್ಷಿ ಆಗಿರುವ ರಮೇಶ್ ಕತ್ತಿ ಬೆಂಬಲಿಸಿ ಅಭಿಮಾನಿವೋರ್ವ ಬ್ಲೇಡ್ನಿಂದ ಕುಯ್ದುಕೊಂಡು ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾನೆ.
ಮಾಜಿ ಸಂಸದ ರಮೇಶ್ ಕತ್ತಿ, ನಿಪ್ಪಾಣಿ ಶಾಸಕಿ ಜೊಲ್ಲೆ ಪತಿ ಅಣ್ಣಾಸಾಹೇಬ ಜೊಲ್ಲೆ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಅಭಿಮಾನಿವೋರ್ವ ರಮೇಶ್ ಕತ್ತಿ ಸಾಹುಕಾರ್ಗೆ ಟಿಕೆಟ್ ನೀಡಬೇಕೆಂದು ಕೈ ಕುಯ್ದುಕೊಂಡಿದ್ದಾನೆ.
ಹುಕ್ಕೇರಿ ತಾಲೂಕು ಹರಗಾಪುರ ಗ್ರಾಮದ ಪವನ್ ಪಾಟೀಲ್ ಎಂಬಾತ ಕೈ ಕುಯ್ದುಕೊಂಡಿರುವ ಯುವಕ. ರಮೇಶ್ ಕತ್ತಿಗೆ ಟಿಕೆಟ್ ಕೊಡುವಂತೆ ಕೈ ಮೇಲೆ KATTI SAVAKAR ಎಂದು ಬ್ಲೇಡ್ನಿಂದ ಕುಯ್ದುಕೊಂಡಿದ್ದಾನೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.