ETV Bharat / state

ಬತ್ತಿದ ಕೃಷ್ಣಾ ನದಿ: ಕಬ್ಬು ಬೆಳೆದ ರೈತರಲ್ಲಿ ಆತಂಕ - undefined

ಕೃಷ್ಣಾ ನದಿಯು ಸಂಪೂರ್ಣವಾಗಿ ಬತ್ತಿದ್ದು, ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಕಳೆದ ಬಾರಿಯ ಕಬ್ಬಿನ ಬಾಕಿ ಹಣವನ್ನು ಕಾರ್ಖಾನೆಗಳು ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ನೀರಿಲ್ಲದೆ ಒಣಗಿರುವ ಭತ್ತದ ಹೊಲ
author img

By

Published : Jul 11, 2019, 6:58 PM IST

ಚಿಕ್ಕೋಡಿ: ಮೂರನಾಲ್ಕು ತಿಂಗಳಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಅತಿ ಹೆಚ್ಚು ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯ ರೈತರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 40 ಸಾವಿರ ಹೆಕ್ಟೇರ್​ಗಿಂತ ಹೆಚ್ವು ಕಬ್ಬನ್ನು ಬೆಳಯಲಾಗುತ್ತದೆ.

ನೀರಿಲ್ಲದೆ ಒಣಗಿರುವ ಭತ್ತದ ಹೊಲ

ಇಲ್ಲಿನ ರೈತರು ನದಿ ನೀರನ್ನು ಅವಲಂಬಿಸಿದ್ದು, ಸುಮಾರು ಶೇ. 75ರಷ್ಟು ಕಬ್ಬು ಒಣಗಿ ನಿಂತಿದೆ. ನದಿ ದಡದ ಮೇಲಿನ‌ ಗ್ರಾಮಗಳಲ್ಲಿ ಅಷ್ಟೇ ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ರೈತರು ಸ್ವಯಂ ಪೈಪ್ ಲೈನ್ ಮೂಲಕ ಸುಮಾರು 50 ಕಿ.ಮೀ.ಗಿಂತ ದೂರದಲ್ಲಿ ಪೈಪ್ ಲೈನ್ ಮಾಡಿ, ಅನೇಕರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಸಾಲ ಹೇಗೆ ತೀರಿಸುವುದು ಹಾಗೂ ಜೀವನ ಹೇಗೆ ಸಾಗಿಸುವುದು ಎಂಬ ಪ್ರಶ್ನೆ ರೈತರಿಗೆ ಎದುರಾಗಿದೆ. ಕಳೆದ‌ ಬಾರಿ ಸಾಗಿಸಿದ ಕಬ್ಬಿಗೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಥಣಿ ತಾಲೂಕು ಒಂದರಲ್ಲಿ 5 ಕಾರ್ಖಾನೆಗಳು ಇವೆ. ಚಿಕ್ಕೋಡಿ ತಾಲೂಕು‌ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿನ ಸಕ್ಕರೆ ಕಾರ್ಖಾನೆ ಸೇರಿ‌ ಮಹಾರಾಷ್ಟ್ರದ ಕೆಲ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲಾಗುತ್ತಿತ್ತು. ಕಬ್ಬು ಒಣಗಿದ್ದರಿಂದ ಮುಂದಿನ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬಿನ ಕೊರತೆ ಎದುರಾಗಲಿದೆ.

ಕಡಿಮೆ ಬೆಲೆಗೆ ಮೇವು ಮಾರಾಟ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಮೇವನ್ನು ಮಾರಾಟ ಮಾಡಲಾಗುತ್ತಿದ್ದು, ಟನ್​ಗೆ ₹1,600ರಿಂದ 1,800 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ಈ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಿದರೆ ₹2,800ರಿಂದ 3,000 ರೂ.ವರೆಗೆ‌ ಮಾರಾಟ‌ ಮಾಡಬಹುದು. ನೀರಿಲ್ಲದೆ ಕಬ್ಬು ಒಣಗಿರೋದರಿಂದ ಅಥಣಿ ಭಾಗದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈಗ ಅದೇ ಜಮೀನಿನಲ್ಲಿ ‌ಮೆಕ್ಕಜೋಳ, ಸೆಣಬು, ತೊಗರಿ ಹೀಗೆ ಇನ್ನಿತರ ಮೂರು ತಿಂಗಳ ಬೆಳೆಗಳನ್ನು ಬೆಳೆಯಲು‌ ಮುಂದಾಗಿದ್ದಾರೆ.

Intro:ಕಬ್ಬು ಬೆಳೆದ ರೈತ ಕಂಗಾಲು : ಕಡಿಮೆ ಬೆಲೆಗೆ ಬೆಳೆದ ಕಬ್ಬನ್ನು‌ ಮೇವಿಗಾಗಿ ಮಾರಾಟBody:

ಚಿಕ್ಕೋಡಿ :
ಸ್ಟೋರಿ

ಕಳೆದ ಮೂರನಾಲ್ಕು ತಿಂಗಳಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಈ ಭಾಗದ ಅತಿ ಹೆಚ್ಚು ನೀರು ಬೆಡುವ ಬೆಳೆಯಾದ ಕಬ್ಬು ಬೆಳೆ ದಿನದಿಂದ ದಿನಕ್ಕೆ ಒಣಗಿದ್ದರಿಂದ ರೈತರು ಸಂಕಷ್ಟ ಅನುಭವಿಸುವ ಪರಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವುದಕ್ಕೆ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಬೆಳೆಗಳು ಒಣಗಿದ್ದು ಪ್ರತಿ ವರ್ಷ 40 ಸಾವಿರ ಹೆಕ್ಟೇರ್ ಗಿಂತ ಹೆಚ್ವು ಬೆಳೆ ಬೆಳಯಲಾಗುತ್ತೆ.

ಇಡೀ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳಯುವ ಪ್ರಮಾಣಕ್ಕಿಂತ ಹೆಚ್ಚು ಕಬ್ಬನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಈ ಬೆಳೆಗಳು ನದಿ ನೀರನ್ನು ಅವಲಂಬಿಸಿದ್ದು ಸುಮಾರು ಶೇಕಡಾ 75% ಪ್ರತಿಶತ ಕಬ್ಬು ಒಣಗಿ ನಿಂತಿದೆ.

ಮೇವಿಗಾಗಿ ಕಬ್ಬು ಬೆಳೆ ಮಾರಾಟ :

ನದಿ ದಡದ ಮೇಲಿನ‌ ಗ್ರಾಮಗಳಲ್ಲಿ ಅಷ್ಟೇ ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ರೈತರು ಸ್ವಯಂ ಪೈಪ್ ಲೈನ್ ಮೂಲಕ ಸುಮಾರು 50 ಕಿ.ಮೀ ಕ್ಕಿಂತ ದೂರದಲ್ಲಿ ಪೈಪ್ ಲೈನ್ ಮಾಡಿ ಕಬ್ಬು ಬೆಳದಿದ್ದಾರೆ. ಸಾಲ ಮಾಡಿಕೊಂಡು ರೈತರು ಕಬ್ಬು ಬೆಳದಿದ್ದಾರೆ. ಆದರೆ, ಈಗ ಆಗಿರುವ ಸಾಲವನ್ನು ಮುಂದೆ ಹೇಗೆ ತೀರಿಸುವುದು ಹಾಗೂ ತಮ್ಮ ಉಪಜೀವನ ಹೇಗೆ ಸಾಗಿಸುವುದು ಎಂಬ ಪ್ರಶ್ನೆ ಈಗ ಈ ಭಾಗದ ರೈತರಲ್ಲಿ ಸಂಕಷ್ಟ ಮೂಡಿಸಿದೆ.

ಮತ್ತೊಂದೆಡೆ ಕಳೆದ‌ಬಾರಿ ಸಾಗಿಸಿದ ಕಬ್ಬಿಗೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿದ್ದು ರೈತರಿಗೆ ಬರೆ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಅಥಣಿ ತಾಲೂಕಿನೊಂದರಲ್ಲಿ 5 ಕಾರ್ಖಾನೆಗಳು ಇದ್ದು ಅಲ್ಲದೇ ಚಿಕ್ಕೋಡಿ ತಾಲೂಕು‌ ಹಾಗೂ ಬಾಗಲಕೋಟ ಜಿಲ್ಲೆಯ ಜಮಖಂಡಿ ಸಕ್ಕರೆ ಕಾರ್ಖಾನೆ ಸೇರಿ‌ ಮಹಾರಾಷ್ಟ್ರದ ಕೆಲ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲಾಗುತ್ತಿತ್ತು. ಈಗ ಕಬ್ಬು ಒಣಗಿದ್ದರಿಂದ ಮುಂದಿನ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬಿನ ಕೊರತೆ ಆಗುವುದು‌ ಖಚಿತವಾಗಿದೆ. ಇದರಿಂದ ಈ ಬಾರಿ‌ ಒಂದು ತಿಂಗಳ ವರೆಗೆ ಕಾರ್ಖಾನೆಗಳು ನಡೆಯುತ್ತವೆ ಎಂಬುವುದು ಸಂಶಯವಾಗಿದೆ.

ಕಡಿಮೆ ಬೆಲೆಗೆ ಮೇವು ಮಾರಾಟ :

ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಮೇವನ್ನು ಮಾರಾಟ ಮಾಡಲಾಗುತ್ತಿದ್ದು ಕೇವಲ ಟನ್ ಗೆ 1,600 ರಿಂದ 1,800 ವರೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ಈ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಿದರೆ 2,800 ರಿಂದ 3,000 ವರೆಗೆ‌ ಮಾರಾಟ‌ ಮಾಡಬಹುದಿತ್ತು. ಆದರೆ, ಕಬ್ಬು ಬೆಳೆಗಳಿಗೆ ನೀರು ಇಲ್ಲದೆ ಕಬ್ಬು ಒಣಗಿರೊದರಿಂದ ಅಥಣಿ ಭಾಗದ ರೈತರು ಕಡಿಮೆ ಬೆಲೆ ಬಂದರೂ ಸಹಿತ ರೈತರು ಯೋಚನೆ ಮಾಡದೆ ಕಬ್ಬುನ್ನು ಮಾರಾಟ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಇದರಿಂದ ಒಂದು ಟನ್ ಕಬ್ಬು ಬೆಳೆಗೆ 1,000 ರೂಪಾಯಿ ನಷ್ಟ ಅನುಭವಿಸಿದಂತಾಗಿದೆ.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತರು ತಾವು ಬೆಳೆದ ಬೆಳಗಳನ್ನು ಬಂದ ಬೆಲೆಗೆ ಮಾರಾಟ ಮಾಡಿ ಈಗ ಅದೇ ಜಮೀನಿನಲ್ಲಿ ‌ಮೆಕ್ಕಜೋಳ, ಸೆಣಬು, ತೊಗರಿ ಹೀಗೆ ಇನ್ನಿತರ ಮೂರು ತಿಂಗಳ ಬೆಳೆಗಳನ್ನು ಬೆಳೆಯಲು‌ ಮುಂದಾಗುತ್ತಿದ್ದಾರೆ. ಶೇ 40% ರಷ್ಟು ಬೆಳೆಗಳನ್ನು ಮೇವಿಗಾಗಿ ರೈತರು ಮಾರಿದ್ದರಿಂದ ಈ ಬಾರಿ ಇಲ್ಲಿನ ಸಕ್ಕರೆ ಕಾರ್ಖಾನೆಗಳು ಒಂದು ತಿಂಗಳುಗಳ ಕಾಲ‌ ನಡೆಯುವುದು ಕಷ್ಟವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.