ETV Bharat / state

ಕಬ್ಬಿನ ಬಾಕಿ ಬಿಲ್ ನೀಡುವಂತೆ ಒತ್ತಾಯ: ಕೊಡಿಹಳ್ಳಿ ಚಂದ್ರಶೇಖರ್​​ ನೇತೃತ್ವದಲ್ಲಿ ಪಾದಯಾತ್ರೆ

ಕಬ್ಬಿನ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಕೊಡಿಹಳ್ಳಿ ಚಂದ್ರಶೇಖರ್​ ನೇತೃತ್ವದಲ್ಲಿ ನೂರಾರು ರೈತರು ಇಂದು ಮಧ್ಯಾಹ್ನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

belagavi
ಕೊಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪಾದಯಾತ್ರೆ
author img

By

Published : Sep 9, 2020, 9:47 PM IST

ಬೆಳಗಾವಿ (ಎಂ.ಕೆ.ಹುಬ್ಬಳ್ಳಿ): ಕಬ್ಬಿನ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಕೊಡಿಹಳ್ಳಿ ಚಂದ್ರಶೇಖರ್​ ನೇತೃತ್ವದಲ್ಲಿ ನೂರಾರು ರೈತರು ಇಂದು ಮಧ್ಯಾಹ್ನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕೊಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪಾದಯಾತ್ರೆ

ಕಬ್ಬಿನ ಬಾಕಿ ಬಿಲ್ ನೀಡದಿರುವ ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುಂಚೆ ಮಲಪ್ರಭಾ ನದಿ ತೀರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ರೈತರು ಮಲಪ್ರಭಾ ಸಹಕಾರಿ ಕಾರ್ಖಾನೆವರೆಗೆ ಪಾದಯಾತ್ರೆ ನಡೆಸುವ ಮೂಲಕ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು.

ಈ ವೇಳೆ ಅಲ್ಲಿಯೇ ಇದ್ದ ಪೊಲೀಸರು ಅವರನ್ನು ತಡೆದು ಪ್ರತಿಭಟನೆ ಶಾಂತಗೊಳಿಸಿದರು. ಇನ್ನು ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತರು, ಕಬ್ಬಿನ ಬಿಲ್ ಬಾಕಿ ನೀಡುವಂತೆ ಒತ್ತಾಯಿಸಿದರು. ಇದಲ್ಲದೇ ಐದಾರು ಕಿ‌ಲೋ ಮೀಟರ್ ವರೆಗೆ ಚಕ್ಕಡಿ, ಟ್ಯ್ರಾಕ್ಟರ್​ಗಳಲ್ಲಿ ರೈತರು ರ್ಯಾಲಿ ನಡೆಸಿದ ಪರಿಣಾಮ ಬೆಳಗಾವಿ- ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಗಂಟೆಗಳ ಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.