ಅಥಣಿ(ಬೆಳಗಾವಿ): ಕಳೆದ ಹತ್ತು ವರ್ಷದಿಂದ ಯಲ್ಲಮ್ಮವಾಡಿ - ಝುಂಜರವಾಡ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯಿಂದಾಗಿ ರಸ್ತೆ ಅಕ್ಕಪಕ್ಕದ ಜಮೀನಿನ ರೈತರು ಹೈರಾಣಾಗಿದ್ದಾರೆ.
ಯಲ್ಲಮ್ಮವಾಡಿ ಇಂದ ಝುಂಜರವಾಡ ಗ್ರಾಮದವರಿಗೆ ಹತ್ತು ಕಿಲೋಮೀಟರ್ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಈ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪದ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣವಾಗಿ ಹದಗೆಟ್ಟ ರಸ್ತೆಯಿಂದ ದಾರಿಯ ಅಕ್ಕಪಕ್ಕದ ಜಮೀನಿನ ಬೆಳೆಗಳ ಮೇಲೆ ಧೂಳು ಆವರಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಧೂಳು ಆವರಿಸಿ ಬೆಳೆದ ಕಬ್ಬನ್ನು ಕಾರ್ಮಿಕರು ಕಟಾವಿಗೆ ಮುಂದಾಗುತ್ತಿಲ್ಲ ಮತ್ತು ಕಟಾವು ಮಾಡಿದರೆ ಒಂದು ಟನ್ ಕಬ್ಬಿಗೆ 500 ರೂಪಾಯಿ ಹೆಚ್ಚುವರಿ ಕೇಳುತ್ತಿದ್ದಾರೆ. ಇದರಿಂದಾಗಿ ನಮಗೆ ತುಂಬಾ ನಷ್ಟ ಸಂಭವಿಸಿದೆ. ಜಮೀನಿನ ಮೇಲೆ ಧೂಳು ಬಿದ್ದು ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ ಮತ್ತೆ ನಮಗೆ ಆಗಿರುವ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡುವಂತೆ ರೈತ ಸಂತೋಷ ಸನದಿ ಆಗ್ರಹಿಸಿದರು.