ಬೆಳಗಾವಿ: ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹೇರಿರುವ ಹಿನ್ನೆಲೆ ಈರುಳ್ಳಿ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಈರುಳ್ಳಿ ಬೆಳೆ ಹೊಲದಲ್ಲಿಯೇ ನಾಶವಾಗಿದ್ದವು. ಇದೀಗ ಲಾಕ್ಡೌನ್ ಮುಗಿದು ಇನ್ನೇನು ಈರುಳ್ಳಿಗೆ ತಕ್ಕ ಬೆಲೆ ಬರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ನಿಲ್ಲಿಸುವಂತೆ ಆದೇಶಿಸಿದೆ. ಈ ನಿರ್ಣಯದಿಂದ ಈರುಳ್ಳಿ ಬೆಲೆ ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದರೆ ಕಷ್ಟಪಟ್ಟು ಬೆಳೆ ತೆಗೆಸ ರೈತರು ತೊಂದರೆ ಅನುಭವಿಸಲಿದ್ದಾರೆ.
ಅಲ್ಲದೇ ಈರುಳ್ಳಿ ಬೆಳೆ ಈಗಾಗಲೇ 100ಕ್ಕೆ 80ರಷ್ಟು ಹಾನಿಗೊಳಗಾಗಿದ್ದು, ಕೇವಲ 20ರಷ್ಟು ಮಾತ್ರ ರೈತನ ಕೈ ಸೇರಿದೆ. ಇಂಥ ವೇಳೆಯಲ್ಲೂ ಸರ್ಕಾರ ರೈತರು ಸುಖ ನೋಡೋದಿಲ್ಲ. ಬದಲಿಗೆ ಸ್ವಲ್ಪ ದರ ಹೆಚ್ಚಾದ್ರೂ ಸರ್ಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವ ಸಾರ್ವಜನಿಕರ ಹಿತ ನೋಡುತ್ತೆ ಅಂತ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ಬೆಲೆ ಹೆಚ್ಚಾಗಿದೆ ಅಂತ ಆಕ್ರೋಶಗೊಂಡಿರೋ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸರ್ಕಾರ ಈರುಳ್ಳಿ ರಪ್ತು ಬ್ಯಾನ್ ನಿರ್ಧಾರ ಕೈಗೊಂಡಿದೆ. ಆದರೆ ರೈತರನ್ನು ಕಡೆಗಣಿಸುತ್ತಿದೆ ಅನ್ನೋದು ರೈತರ ಆರೋಪ.
ಈಗಾಗಲೇ ಕೊರೊನಾ ಸಂಕಷ್ಟಕ್ಕೆ ನಲುಗಿದ ಈರುಳ್ಳಿ ಬೆಳೆಗಾರರು ಅಳಿದುಳಿದ ತಮ್ಮ ಈರುಳ್ಳಿ ಬೆಳೆಗೆ ದರ ಹೆಚ್ಚಾದ್ರೂ ಸಾರ್ವಜನಿಕರು ಸಹಕರಿಸಬೇಕು.ಇದ್ರಿಂದ ರೈತರ ಉಳಿಯಲು ಸಾಧ್ಯವಿದೆ. ಬಂಗಾರ, ಫ್ಯಾಷನ್ ವಸ್ತುಗಳಿಗೆ ಎಷ್ಟೇ ಬೆಲೆ ಇದ್ರೂ ಜನ ಅದಕ್ಕೆ ಯಾವುದೇ ಮಾತನಾಡದೇ ತೆಗೆದುಕೊಳ್ಳಲು ಹೋಗುತ್ತಾರೆ.ಇದೇ ರೀತಿ ರೈತರ ಬೆಳೆಗಳಲ್ಲಿ ದರ ಸ್ವಲ್ಪಮಟ್ಟಿಗೆ ಹೆಚ್ಚಾದ್ರೂ ಅದನ್ನು ವಿರೋಧಿಸದೇ ಕೊಂಡುಕೊಳ್ಳಬೇಕು ಎನ್ನುತ್ತಾರೆ ಈರುಳ್ಳಿ ಬೆಳೆದ ರೈತರು.