ETV Bharat / state

ಸಾಲಬಾಧೆ: ವಿದ್ಯುತ್​ ಸ್ಪರ್ಶಿಸಿ ಆತ್ಮಹತ್ಯೆಗೆ ಶರಣಾದ ರೈತ.. - Farmer commits suicide in Athani

ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಬೆಳೆ ಕೈಕೊಟ್ಟಿದ್ದರಿಂದ ಸಾಲಕ್ಕೆ ಹೆದರಿದ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ರೈತನೋರ್ವ ವಿದ್ಯುತ್ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

Farmer Siddappa committed suicide at athani
ವಿದ್ಯುತ್​ ಸ್ಪರ್ಶಿಸಿ ಆತ್ಮಹತ್ಯೆಗೆ ಶರಣಾದ ರೈತ.
author img

By

Published : Nov 23, 2020, 3:32 PM IST

Updated : Nov 23, 2020, 4:41 PM IST

ಅಥಣಿ: ಅತಿಯಾದ ಸಾಲಬಾಧೆಗೆ ಹೆದರಿ ತಾಲೂಕಿನ ತೇಲಸಂಗ ಗ್ರಾಮದ ರೈತನೋರ್ವ ವಿದ್ಯುತ್ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶ್ರೀಶೈಲ್ ಶಲ್ಯಾಪಗೋಳ ಮಾತನಾಡಿದರು
ಸಿದ್ದಪ್ಪ ದೇವಕಾತೆ (37) ಎಂಬಾತ ಮೃತ ದುರ್ದೈವಿ. ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಬೆಳೆಗೆ ಅವಲಂಬಿತನಾಗಿ ಸರಿ ಸುಮಾರು 20 ಲಕ್ಷದವರೆಗೆ ವಿವಿಧ ಬ್ಯಾಂಕ್​ಗಳಲ್ಲಿ ಸಾಲ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆ ಕೈಕೊಟ್ಟಿದ್ದರಿಂದ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ತೋಟದ ವಿದ್ಯುತ್ ಮೋಟಾರ್ ಸ್ಟಾರ್ಟರ್ ಬಾಕ್ಸ್​ನಲ್ಲಿ ವಿದ್ಯುತ್ ಸ್ಪರ್ಶ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Last Updated : Nov 23, 2020, 4:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.