ಚಿಕ್ಕೋಡಿ : ಲಾಕ್ಡೌನ್ ಹಿನ್ನೆಲೆ 4 ಎಕರೆ ಜಮೀನಿನಲ್ಲಿ ಬೆಳೆದ ಟೊಮ್ಯಾಟೊ ಬೆಳೆಗೆ ಬೇಡಿಕೆ ಸಿಗದೆ ಕೆನಾಲ್ಗೆ ಸುರಿದು ರೈತರು ನಾಶ ಮಾಡಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ರೈತ ಅಮೀತ ಕೋಳಿ ಸುಮಾರು 120 ಟನ್ ಟೊಮ್ಯಾಟೊ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಇತ್ತ ಬೆಲೆನೂ ಸಿಗದೇ ಬೇಸತ್ತು ಸುಮಾರು 8 ಲಕ್ಷದ ಬೆಳೆ ನಾಶ ಮಾಡಿದ್ದಾನೆ.
ಲಾಕ್ಡೌನ್ಗೂ ಮೊದಲು 1 ಕೆಜಿಗೆ 20 ರೂ. ಸಿಗುತ್ತಿದ್ದ ಟೊಮ್ಯಾಟೊಗೆ ಈಗ ಕೇವಲ 2 ರೂ. ಬೇಡಿಕೆನೂ ಬರುತ್ತಿಲ್ಲ. ಅಲ್ಲದೇ ಗಲ್ಲಿಗಲ್ಲಿಯಲ್ಲಿ ತಿರುಗಾಡಿ ಮಾರಾಟ ಮಾಡಿದ್ರೆ ಪೆಟ್ರೋಲ್ ದುಡ್ಡು ಸಹ ಬರುತ್ತಿಲ್ಲ ಎಂದು ರೈತ ಆಕ್ರೋಶಗೊಂಡು ಈ ನಿರ್ಧಾರಕ್ಕೆ ಬಂದಿದ್ದಾನೆ.