ETV Bharat / state

ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಯತ್ನ ಖಂಡಿಸಿ ರೈತ ಮುಖಂಡರಿಂದ ಪ್ರತಿಭಟನೆ - ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಯತ್ನ ಖಂಡಿಸಿ ಪ್ರತಿಭಟನೆ

ಭಾರತೀಯ ಕಿಸಾನ್​ ಯೂನಿಯನ್​ನ ಮುಖಂಡ ರಾಕೇಶ್ ಟಿಕಾಯತ್ ಮೇಲೆ ರಾಜಸ್ಥಾನದಲ್ಲಿ ಹಲ್ಲೆಗೆ ಯತ್ನಿಸಿದ್ದನ್ನು ಖಂಡಿಸಿ ಬೆಳಗಾವಿಯಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

farmer leaders protest at Belgavi
ಬೆಳಗಾವಿಯಲ್ಲಿ ರೈತ ಮುಖಂಡರಿಂದ ಪ್ರತಿಭಟನೆ
author img

By

Published : Apr 3, 2021, 11:41 PM IST

ಬೆಳಗಾವಿ : ಭಾರತೀಯ ಕಿಸಾನ್​ ಯೂನಿಯನ್​ನ ಮುಖಂಡ ‌ರಾಕೇಶ್ ಟಿಕಾಯತ್ ಮೇಲೆ ದಾಳಿಗೆ ಯತ್ನಿಸಿದ್ದಾರೆ ಎನ್ನಲಾದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ‌ಆಗ್ರಹಿಸಿ ನಗರದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ‌ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ರೈತ ನಾಯಕ ಟಿಕಾಯತ್ ಮೇಲೆ ದಾಳಿ: ಕ್ರಮಕ್ಕೆ ರೈತ ಸಂಘಟನೆಗಳ ಆಗ್ರಹ

ಬಳಿಕ, ಲೋಕಸಭೆ ಉಪಚಚುನಾವಣೆ ನೀತಿ ಸಂಹಿತಿ ಜಾರಿ ಇರುವ ಕಾರಣ ಡಿಸಿ ಕಚೇರಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದ ಪ್ರತಿಭಟನೆ ಮುಂದುವರೆಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು, ರೈತರ ಹೋರಾಟ ಹತ್ತಿಕ್ಕಲು ಬಿಜೆಪಿ ನಮ್ಮ ವಿರುದ್ಧ ದಾಳಿಗೆ ಮುಂದಾಗಿದೆ. ನಾವು ಬಿಜೆಪಿ ಕಾರ್ಯಕರ್ತರ ದಾಳಿಗೆ ಹೆದರಲ್ಲ. ಕೃಷಿ ಕಾನೂನು ಜಾರಿ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ರಾಕೇಶ್ ಟಿಕಾಯತ್ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮವಾಗಬೇಕು. ದಾಳಿ ಮೂಲಕ ನಮ್ಮನ್ನು ಬೆದರಿಸುವ ಕೃತ್ಯದಿಂದ ಬಿಜೆಪಿ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.