ಅಥಣಿ (ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷ್ಣಾ ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಸುರಕ್ಷಿತ ಸ್ಥಳಕ್ಕೆ ಹೊರಡುವಾಗ ಸವದಿ ಗ್ರಾಮಸ್ಥನೋರ್ವ ಹರಿಯುವ ನೀರಿನಲ್ಲಿ ಕೊಚ್ಚಿ ಹೊರಗಿರುವ ಘಟನೆ ಸಂಭವಿಸಿದೆ. ಸವದಿ ಗ್ರಾಮದ ರಾಮುಗೌಡ ಸಿದ್ದುಗೌಡ ಪಾಟೀಲ್ (55) ನದಿಯಲ್ಲಿ ನಾಪತ್ತೆಯಾಗಿದ್ದು, ಕುಟುಂಬ ವರ್ಗದಲ್ಲಿ ಆತಂಕ ಮನೆಮಾಡಿದೆ.
ಕಳೆದ ಎರಡು ದಿನದಿಂದ ಪ್ರತಿ ಕ್ಷಣವೂ ನದಿಯಲ್ಲಿ ನೀರಿಯ ಮಟ್ಟ ಹೆಚ್ಚಾಗಿದ್ದರಿಂದ, ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಹೊಗುವ ಸಂದರ್ಭದಲ್ಲಿ ನದಿ ನೀರಿನ ಸೆಳತಕ್ಕೆ ಸಿಲುಕಿ ಈ ದುರಂತ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳಿಯ ಪೋಲಿಸರು ಆಗಮಿಸಿದ್ದು, ಎನ್ಡಿಆರ್ಎಫ್ ತಂಡ ಶೋಧಕಾರ್ಯ ಮುಂದುವರಿಸಿದೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸ್ಥಳಕ್ಕೆ ಬೇಟಿ ನೀಡಿ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡಿದ್ದಾರೆ.