ETV Bharat / state

ಬಳ್ಳಾರಿ : ಕೆಳಗೆ ಬಿದ್ದ ವಿದ್ಯುತ್ ತಂತಿ ಮುಟ್ಟಿ ರೈತ ಸಾವು - ಬಳ್ಳಾರಿ ಸುದ್ದಿ

ಮೃತ ರೈತ ಓರ್ವ ಪುತ್ರಿ, ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಈ ಬಡ ಕುಟುಂಬಕ್ಕೆ ಆಧಾರವಾಗಿದ್ದ ರೈತನನ್ನ ಕಳೆದುಕೊಂಡ ಆ ಕುಟುಂಬದ ಅರಣ್ಯ ರೋಧನ ಮುಗಿಲು ಮುಟ್ಟಿದೆ..

farmer died in bellary
ರೈತ ಸಾವು
author img

By

Published : Dec 16, 2020, 3:30 PM IST

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಾಪುರ ಗ್ರಾಮದ ಹೊರ ವಲಯದಲ್ಲಿ ಇಂದು ಭತ್ತ ಕಟಾವು ಮಾಡುವ ವೇಳೆ ಕೆಳಗಡೆ ಬಿದ್ದ ವಿದ್ಯುತ್ ವಾಹಕ ತಂತಿಯನ್ನ ಮುಟ್ಟಿದ ಪರಿಣಾಮ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭೈರಾಪುರ ಗ್ರಾಮದ ಹನುಮಂತಗೌಡ (34) ಎಂಬಾತ ಮೃತಪಟ್ಟ ರೈತನೆಂದು ಗುರುತಿಸಲಾಗಿದೆ. ಇಂದು ಮುಂಜಾನೆ ಭತ್ತದ ಕಟಾವು ಮಾಡುವಾಗ ವಿದ್ಯುತ್ ವಾಹಕ ತಂತಿಯೊಂದು ಕೆಳಗಡೆ ಬಿದ್ದಿದೆ. ವಿದ್ಯುತ್ ಪೂರೈಕೆ ಇಲ್ಲ ಎಂದುಕೊಂಡು ಕೆಳಗೆ ಬಿದ್ದ ವಿದ್ಯುತ್ ತಂತಿ ಮುಟ್ಟಿ ರೈತ ಮೃತಪಟ್ಟಿದ್ದಾನೆಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹುಬ್ಬಳ್ಳಿ : ಮಹಿಳೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಅಂದರ್​

ಮೃತ ರೈತ ಓರ್ವ ಪುತ್ರಿ, ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಈ ಬಡ ಕುಟುಂಬಕ್ಕೆ ಆಧಾರವಾಗಿದ್ದ ರೈತನನ್ನ ಕಳೆದುಕೊಂಡ ಆ ಕುಟುಂಬದ ಅರಣ್ಯ ರೋಧನ ಮುಗಿಲು ಮುಟ್ಟಿದೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.