ETV Bharat / state

ಬೆಳಗಾವಿ: ಮಧ್ಯಪ್ರದೇಶಕ್ಕೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯ ಜಪ್ತಿ - ಮಶ್ರೂಮ್ ಬೀಜ

ಗೋವಾದಿಂದ ಮಧ್ಯಪ್ರದೇಶಕ್ಕೆ ಮಶ್ರೂಮ್ ಬೀಜದ ಮಣ್ಣಿನ ಚೀಲಗಳ ನಡುವೆ 600 ಪೆಟ್ಟಿಗೆ ನಕಲಿ ಮದ್ಯದ ಬಾಟಲಿಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಲಾರಿಯನ್ನು ಬೆಳಗಾವಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Huge worth of Goan liquor seized.
ಬೆಳಗಾವಿ ಅಬಕಾರಿ ಪೊಲೀಸರಿಂದ ಅಪಾರ ಮೌಲ್ಯದ ಗೋವಾ ಮದ್ಯ ಜಪ್ತಿ.
author img

By ETV Bharat Karnataka Team

Published : Dec 22, 2023, 6:51 PM IST

ಅಬಕಾರಿ ಅಪರ ಆಯುಕ್ತ ಮಂಜುನಾಥ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ: ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ. ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಮತ್ತೊಂದು ಜಾಲವನ್ನು ಗುರುವಾರ ರಾತ್ರಿ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಪಾರ ಪ್ರಮಾಣದ ಗೋವಾ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಬೆಳಗಾವಿ ತಾಲೂಕಿನ ಕಾಕತಿ ಬಳಿ ದಾಳಿ ಮಾಡಲಾಗಿದ್ದು ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಮಶ್ರೂಮ್ ಬೀಜದ ಮಣ್ಣಿನ ಚೀಲಗಳ ಮಧ್ಯೆ ಮದ್ಯದ ಬಾಟಲಿಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಇಬ್ಬರು ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಅದಂ ಕುತುಬುದ್ದೀನ್ ಮತ್ತು ಆಸೀಫ್ ರೆಹಮಾನ್ ಬಂಧಿತರು. ಕಳೆದ ಆರು ತಿಂಗಳಲ್ಲಿ 5ನೇ ಭರ್ಜರಿ ಕಾರ್ಯಾಚರಣೆ ಇದಾಗಿದೆ.

600 ಪೆಟ್ಟಿಗೆಗಳಲ್ಲಿ ನಕಲಿ ಮದ್ಯ ಸಾಗಣೆ: ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ ಪ್ರತಿಕ್ರಿಯಿಸಿ, ಈ ಮದ್ಯ ಅಧಿಕೃತ ಡಿಸ್ಟಿಲರಿಗಳಲ್ಲಿ ತಯಾರಾಗಿಲ್ಲ. ಬಾಟಲಿಗಳ ಮೇಲೆ ನಮೂದಿಸಿರುವ ಪಿಗಾರ್ಟ್ ಚಾಂಪಿಯನ್ ಆ್ಯಂಡ್ ಡಿಸ್ಟಿಲರಿ ಗೋವಾದಲ್ಲಿ ಇಲ್ಲ. ಹಾಗಾಗಿ ಇದು ನಕಲಿ ಮದ್ಯ. ಸುಮಾರು 600 ಪೆಟ್ಟಿಗೆಗಳಲ್ಲಿ ಸಾಗಣೆ ಮಾಡಲಾಗುತ್ತಿತ್ತು. ರಾಯಲ್ ಬ್ಲೂ ಮತ್ತು ಬ್ಲಾಕ್ ಪಾಲ್ಕನ್ ಕಂಪನಿಯ ಮದ್ಯ ದೊರೆತಿವೆ. ಯಾರಿಗೂ ಅನುಮಾನ ಮತ್ತು ವಾಸನೆ ಬರಬಾರದೆಂದು ಮಶ್ರೂಮ್ ಬೀಜಗಳ ಚೀಲದ ನಡುವೆ ಮದ್ಯ ಸಾಗಿಸುತ್ತಿದ್ದರು ಎಂದು ತಿಳಿಸಿದರು.

ಹಿಂದೊಂದು ಬಾರಿ ಈ ಲಾರಿಯಲ್ಲಿ ನಮ್ಮ ಕಣ್ತಪ್ಪಿಸಿ ಮದ್ಯ ಸಾಗಿಸಲಾಗಿತ್ತು. ಆದರೆ ಈ ಸಲ ಅಧಿಕಾರಿಗಳ ಚಾಣಾಕ್ಷತನದಿಂದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಈ ಮದ್ಯವನ್ನು ಯಾರು ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಅವರನ್ನೂ ಕೂಡ ಬಂಧಿಸುತ್ತೇವೆ ಎಂದರು.

ಮದ್ಯ ನಾಶಪಡಿಸುವಲ್ಲಿ ಅಕ್ರಮವಿಲ್ಲ: ಜಪ್ತಿ ಮಾಡಿಕೊಂಡಿರುವ ಮದ್ಯ ನಾಶಪಡಿಸುವಲ್ಲಿ ಅಕ್ರಮ ಎಸಗಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ವೈ.ಮಂಜುನಾಥ, ಆ ರೀತಿ ಖಂಡಿತಾ ಇಲ್ಲ. ಕಳೆದ ಚುನಾವಣೆಯಲ್ಲಿ ಸಿಕ್ಕಿದ ಮದ್ಯವದು. ಈಗ ಮೂರು ಕೇಸ್​ಗಳದ್ದು ಇನ್ನೂ ತನಿಖಾ ಹಂತದಲ್ಲಿದೆ. ನಾವು ವಶಪಡಿಸಿಕೊಂಡ ಮದ್ಯ ಮಾರ್ಕೆಟ್‌ನಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಇನ್ಮುಂದೆ ಮಾಧ್ಯಮಗಳ ಮುಂದೆಯೇ ನಾಶಪಡಿಸಲಾಗುವುದು ಎಂದು ಹೇಳಿದರು.

ಮುಗಿಬಿದ್ದ ಜನ: ಜಪ್ತಿ ಮಾಡಿದ ಲಾರಿಯನ್ನು ನೋಡಲು ಸಾರ್ವಜನಿಕರು, ಯುವಕ-ಯುವತಿಯರು ಮುಗಿಬಿದ್ದರು. ಲಾರಿಯಲ್ಲೇನಿದೆ ಎಂದು ಅವರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಕೆಲವರು ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿಕೊಂಡರು.

ಇದನ್ನೂಓದಿ: ಯೋಗೇಶ್ವರ್​ ಬಾವನ ಕೊಲೆ ಕೇಸ್: ರಾಮಪುರ, ಹನೂರಲ್ಲಿ ಸ್ಥಳ ಮಹಜರು, ಟೀ ಶರ್ಟ್ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.