ಚಿಕ್ಕೋಡಿ : ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದ ಮಾಜಿ ಯೋಧ ಬೀಮಪ್ಪ ಅಪ್ಪಣ್ಣಾ ಬೊರಗಲ್ಲೆ (89) ಮೃತ ಮಾಜಿ ಯೋಧನಿಗೆ ಭಾರತೀಯ ಸೇನೆಯ ನಿಯಮದಂತೆ ಗೌರವ ಸಲ್ಲಿಸಿ ಅಂತ್ಯಕ್ರಿಯೆ ಮಾಡಲಾಗಿದೆ.
ಬೀಮಪ್ಪ 1935 ರಲ್ಲಿ ರೈತಾಪಿ ಕುಟುಂಬದಲ್ಲಿ ಹುಟ್ಟಿ ಪ್ರಪ್ರಥಮವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣದಿಂದ 1950 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. 1962 ಮತ್ತು 1965 ರಲ್ಲಿ ಚೀನಾ ದೇಶದ ವಿರುದ್ದ ಯುದ್ದದಲ್ಲಿಯೂ ಪಾಲ್ಗೊಂಡಿದ್ದರೆಂದು ತಿಳಿದುಬಂದಿದೆ.
ಸೇನೆಯಲ್ಲಿ ಸೇವೆ ಸಲ್ಲಿಸಿದ ಕೊಣ್ಣೂರಿನ ಹಾಗೂ ಸುತ್ತಮುತ್ತಲಿನ ಮಾಜಿ ಸೈನಿಕರು ಸೇನೆಯ ನಿಯಮದಂತೆ ಮಂಗಳವಾರ ಅಗಲಿದ ಹಿರಿಯ ಮಾಜಿ ಯೋಧನಿಗೆ ಗೌರವ ಸಲ್ಲಿಸಿ ಅವರ ಕುಟುಂಬಕ್ಕೆ ಧ್ವಜವನ್ನು ನೀಡಿ ರಾಷ್ಟ್ರ ಪ್ರೇಮ ಮೆರೆದರು.