ಬೆಳಗಾವಿ: ಅಪಘಾತಗೊಂಡು ರಸ್ತೆ ಮೇಲೆ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡುವ ಜೊತೆಗೆ ಚಿಕಿತ್ಸೆ ವೆಚ್ಚಕ್ಕೆ 10 ಸಾವಿರ ರೂಪಾಯಿ ಹಣ ನೀಡಿ ಪ್ರಕಾಶ ಹುಕ್ಕೇರಿ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಸಚಿವ ಪ್ರಕಾಶ ಹುಕ್ಕೇರಿ ತಮ್ಮ ಸ್ವಂತ ವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಯಾರೋ ಅಪಘಾತಕ್ಕೀಡಾಗಿ ರಸ್ತೆ ಮೇಲೆ ಬಿದ್ದು ವಿಲವಿಲನೇ ಒದ್ದಾಡುತ್ತಿದ್ದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿ ಅಪಘಾತದಿಂದ ನರಳುತ್ತಿದ್ದ ಗಾಯಾಳುಗಳನ್ನು ಸಚಿವರು ಗಮನಿಸಿದ್ದಾರೆ. ತಕ್ಷಣವೇ ತಮ್ಮ ವಾಹನದಿಂದ ಕೆಳಗಿಳಿದ ಪ್ರಕಾಶ ಹುಕ್ಕೇರಿ ಆ್ಯಂಬುಲೆನ್ಸ್ಗೆ ಫೋನ್ ಮಾಡಿದ್ದಾರೆ.
ಬಳಿಕ ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಹಾಗೂ ಆತನಿಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಅಲ್ಲದೇ ಚಿಕಿತ್ಸಾ ವೆಚ್ಚಕ್ಕೆ 10 ಸಾವಿರ ಧನ ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಬೇಕಾದ್ರೆ ಆಪ್ತ ಸಹಾಯಕನನ್ನು ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ. ಪ್ರಕಾಶ ಹುಕ್ಕೇರಿಯವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಗಡಿ ಪ್ರವೇಶಿಸಿದ್ದ 15 ಇರಾನಿ ಮೀನುಗಾರರ ಬಿಡುಗಡೆಗೊಳಿಸಿದ ಹೈಕೋರ್ಟ್