ETV Bharat / state

ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ - ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 456 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನವನ್ನು ಅಥಣಿ ತಾಲೂಕಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಮೂಲಕ ವಿತರಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ
author img

By

Published : May 30, 2020, 12:47 PM IST

ಅಥಣಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕರ್ತವ್ಯ ಪಾಲನೆ ಮಾಡಿದ ತಾಲೂಕಿನ 456 ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಅಥಣಿ ತಾಲೂಕಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಮೂಲಕ ನೀಡಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ

ಈ ವೇಳೆ ಮಾತನಾಡಿದ ಮಹಿಳಾ ಕೋ-ಆಪರೇಟಿವ್ ಸಹ ಕಾರ್ಯದರ್ಶಿ ಮುರುಗೇಶ ಬಾನೆ, ಸರ್ಕಾರ ಕೊಡುವ ಅಲ್ಪ ಗೌರವ ಧನದಲ್ಲಿಯೇ ಬದುಕು ಸಾಗಿಸುವ ಆಶಾ ಕಾರ್ಯಕರ್ತರು, ತಮ್ಮ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಕೊರೊನಾ ವಾರಿಯರ್ಸ್​ಗೆ ಸಹಕಾರಿಗಳ ಸಲಾಂ ತತ್ವದ ಅಡಿಯಲ್ಲಿ ಇಂದು ಹಲ್ಯಾಳ, ಸಂಕೋನಟ್ಟಿ, ಅನಂತಪುರ ಮತ್ತು ಶಂಬರಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ನಿರ್ದೇಶನದ ಮೇರೆಗೆ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿದ್ದೇವೆ ಎಂದರು.

ಅಥಣಿ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಮೂಲಕ ಒಟ್ಟು 13,68,000 ರೂ. ಧನಸಹಾಯವನ್ನು ನೀಡಲಾಗುತ್ತಿದ್ದು, ಅಥಣಿ, ತೆಲಸಂಗ, ಅನಂತಪುರ ಹೋಬಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ ಒಟ್ಟು 456 ಆಶಾ ಕಾರ್ಯಕರ್ತೆಯರಿಗೆ ಹಂತ ಹಂತವಾಗಿ ಚೆಕ್ ವಿತರಣೆ ಮಾಡಲಾಗುತ್ತಿದೆ.

ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ರವಿ ಪೂಜಾರಿ ಮಾತನಾಡಿ, ಕೋವಿಡ್-19 ಫ್ರಂಟ್​ ಲೈನ್ ವಾರಿಯರ್​ಗಳಾಗಿ ಕಳೆದ ಮೂರು ತಿಂಗಳಿಂದ ದುಡಿಯುತ್ತಿರುವ ಆಶಾ ಸಹೋದರಿಯರ ಕೆಲಸಕ್ಕೆ ಬೆಲೆ ಕಟ್ಟಲು ಆಗದು. ಹಾಗಾಗಿ ಚಿಕ್ಕ ಧನಸಹಾಯವನ್ನು ಅಥಣಿ ತಾಲೂಕಿನಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ವಿತರಣೆ ಮಾಡಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.