ETV Bharat / state

ಆನೆ ದಂತದ ಬ್ರಾಸ್ಲೈಟ್, ಹುಲಿ ಉಗುರು ಮಾರಾಟ ಮಾಡುತ್ತಿದ್ದವ ಅಂದರ್

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಳಗಾವಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಹುಲಿ ಉಗುರು, ಆನೆ ದಂತದ ಖಡ್ಗ ಮಾರುತ್ತಿದ್ದವನನ್ನು ಬಂಧಿಸಿದ್ದಾರೆ.

elephant ivory bracelet and tiger nail seller arrest
ಬೆಳಗಾವಿಯಲ್ಲಿ ಆನೆ ದಂತದ ಬ್ರಾಸ್ಲೈಟ್ ಮಾರುತ್ತಿದ್ದವನ ಬಂಧನ
author img

By

Published : Dec 15, 2020, 3:32 PM IST

ಬೆಳಗಾವಿ: ಆನೆ ದಂತದ ಕೈ ಖಡ್ಗ (ಬ್ರಾಸ್ಲೈಟ್) ಮತ್ತು ಹುಲಿ ಉಗುರಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ‌.

ಇದನನ್ನೂ ಓದಿ: ಶ್ರೀಗಂಧ ಮರ ಕಳ್ಳತನ: ಮೂವರು ಆರೋಪಿಗಳ ಬಂಧನ

ನಗರದ ಶಾಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ ಬಂಧಿತ ಆರೋಪಿ. ಈತನಿಂದ ಆನೆ ದಂತದಿಂದ ತಯಾರಿಸಿದ ಎರಡು ಕೈ ಖಡ್ಗ ಹಾಗೂ ಹುಲಿಯ ಐದು ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ‌.

ಬೆಳಗಾವಿ ಸಂಚಾರಿ ಅರಣ್ಯ ದಳದ ಸಿಬ್ಬಂದಿ ಕಾರ್ಯಾಚರಣೆ:

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್ಐ ರೋಹಿಣಿ ಪಾಟೀಲ್ ನೇತೃತ್ವದ ತಂಡ ಆರೋಪಿಯನ್ನು ಖೆಡ್ಡಾಗೆ ಕೆಡವಿದೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯಿಂದ ಖಡ್ಗ ಹಾಗೂ ಉಗುರು ಖರೀದಿಸಿದವರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.