ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ 2021ರ ಕುರಿತು 58 ವಾರ್ಡ್ಗಳಿಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಸೆಪ್ಟೆಂಬರ್ 3 ರಂದು ಮತದಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರನ್ನು ನಿಯೋಜಿಸಲಾಗಿದೆ. ಭೂ ಸ್ವಾಧೀನ ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ ಅವರನ್ನು ವಾರ್ಡ್ ಸಂಖ್ಯೆ 1 ರಿಂದ 29 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.
ಕೃಷಿ ಇಲಾಖೆಯ ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಅವರನ್ನು ವಾರ್ಡ್ ಸಂಖ್ಯೆ 30 ರಿಂದ 58 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಸಮಯ ವಿಸ್ತರಣೆ ಮಾಡಲಾಗಿದೆ. ಮೊದಲು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಿಗದಿಪಡಿಸಲಾಗಿತ್ತು.
ಆದರೆ, ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ರಾಯಬಾಗ ಪಟ್ಟಣ ಪಂಚಾಯಿತಿ ವಾರ್ಡ್ ನಂ. 9 ಹಾಗೂ ಪುರಸಭೆ ಸವದತ್ತಿ ಯಲ್ಲಮ್ಮ ವಾರ್ಡ್ ನಂ. 23 ರ ಮತದಾನದ ಸಮಯವನ್ನು ಚುನಾವಣೆ ಆಯೋಗ ಬೆಳಗ್ಗೆ 7 ರಿಂದ 6ರವರೆಗೆ ವಿಸ್ತರಿಸಿದೆ.
ಓದಿ: ಬೆಳಗಾವಿಯಲ್ಲಿ ಸಿಗುತ್ತಿಲ್ಲ 'ಪೊಸಕೊನಜೋಲ್' ಮಾತ್ರೆ: ಬ್ಲ್ಯಾಕ್ ಫಂಗಸ್ ಸೋಂಕಿತರ ಪರದಾಟ