ಚಿಕ್ಕೋಡಿ: ಜೊರಾಗಿ ಗಾಳಿ ಬೀಸಿದ ಪರಿಣಾಮ ಚೆಕ್ಪೋಸ್ಟ್ನ ತಗಡಿನ ಮೇಲ್ಛಾವಣಿ ಹಾರಿ ಚುನಾವಣಾ ಸಿಬ್ಬಂದಿಗಳ ಮೇಲೆ ಬಿದ್ದಿದೆ. ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಿಪ್ಪಾಣಿ-ಮುರಗೋಡ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಅಲ್ಪ ಪ್ರಮಾಣದ ಮಳೆ ಜೊತೆಗೆ ಜೋರಾಗಿ ಗಾಳಿ ಬೀಸಿದ ಹಿನ್ನೆಲೆ ಚೆಕ್ಪೋಸ್ಟ್ನ ತಗಡಿನ ಮೇಲ್ಛಾವಣಿ ಹಾರಿ ಚುನಾವಣೆ ಭದ್ರತೆಯಲ್ಲಿ ಕರ್ತವ್ಯದಲ್ಲಿದ್ದ ವಾಸವೇ ಕಲುಸಿಂಗ್ ಗೋಮಾ, SSB ಆರ್ಮಿ ಸಿಬ್ಬಂದಿ, ಹಾಗೂ ಸ್ಥಳಿಯ ಪಂಚಾಯತಿ ಮಾರುತಿ ಸುಧಾಕರ ಪಾಟೀಲ್ ಎಂಬವರ ಮೇಲೆ ಬಿದ್ದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚುನಾವಣಾ ಕರ್ತವ್ಯಕ್ಕಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್ಪೋಸ್ಟ್ನಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: 2018ರ ಚುನಾವಣೆಗೆ ಹೋಲಿಸಿದರೆ ಕರ್ನಾಟಕದಲ್ಲಿ ವಶಪಡಿಸಿಕೊಳ್ಳುವಿಕೆ ನಾಲ್ಕು ಪಟ್ಟು ಹೆಚ್ಚಾಗಿದೆ: ಚುನಾವಣಾ ಆಯೋಗ