ಅಥಣಿ: ಲಾಕ್ಡೌನ್ನಿಂದ ಪರದಾಡುತ್ತಿದ್ದ ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ಔಷಧಿ ಪೂರೈಸುವ ಕಾರ್ಯಕ್ಕೆ ಅಥಣಿಯ ಸಹಾಯ ಫೌಂಡೇಶನ್ ಮುಂದಾಗಿದೆ.

ಇಲ್ಲಿನ ಔಷಧಿ ಅಂಗಡಿಗಳು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ತೆರೆಯುವಂತೆ ಅಧಿಕಾರಿಗಳು ಸಮಯ ನಿಗದಿಗೊಳಿದ್ದಾರೆ. ಆದರೆ, ಇನ್ನುಳಿದ ಸಮಯದಲ್ಲಿ ತುರ್ತಾಗಿ ಔಷಧಿ ಬೇಕಾದಲ್ಲಿ ಸಹಾಯ ಫೌಂಡೇಶನ್ಗೆ ಕರೆ ಮಾಡಿದರೆ, ಅಗತ್ಯವಿರುವ ಔಷಧಿಯನ್ನು ಮನೆ ಬಾಗಿಲಿಗೆ ಪೂರೈಸುತ್ತಾರೆ. ಇದಕ್ಕೆ ಯಾವುದೇ ಹಣವನ್ನೂ ಪಡೆಯುವುದಿಲ್ಲ.
ಈಗಾಗಲೇ ಅಥಣಿಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರಕಟಣೆ ನೀಡಿ, ತಮ್ಮ ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಿದ್ದು, ಸಾಕಷ್ಟು ಜನರ ಸಹಾಯಕ್ಕೆ ಫೌಂಡೇಶನ್ ಸಹಾಯ ಹಸ್ತ ಚಾಚಿದೆ.
ಈ ಹಿಂದೆ ಕೃಷ್ಣಾ ನದಿಯ ಭೀಕರ ಪ್ರವಾಹ ಬಂದಾಗಲೂ ಸುಮಾರು 1.20 ಲಕ್ಷ ರೂಪಾಯಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಅದರಿಂದ ಅವಶ್ಯಕ ವಸ್ತು ಖರೀದಿಸಿ, ನೆರೆ ಪೀಡಿತರಿಗೆ ನೆರವಾಗಿದ್ದರು.
ಸಹಾಯವಾಣಿ 9035206059, 9964761435 ಗೆ ಕರೆ ಮಾಡಿ, ಸೇವೆಯನ್ನು ಪಡೆಯಬಹುದು ಎಂದು ಸಹಾಯ ಫೌಂಡೇಶನ್ ಕಾರ್ಯದರ್ಶಿ ಸಂತೋಷ ಬಡಕಂಬಿ ತಿಳಿಸಿದ್ದಾರೆ.