ETV Bharat / state

ಬೆಳಗಾವಿ: ಪೈಪ್‍ಲೈನ್‍ ಒಡೆದು ರಸ್ತೆಗೆ ಚಿಮ್ಮಿತು ಕುಡಿಯುವ ನೀರು

author img

By

Published : Mar 9, 2021, 3:41 PM IST

ಬೆಳಗಾವಿ ನಗರದ ಗೋವಾ ವೇಸ್ ಬಳಿ ಬೋರ್​ವೆಲ್​ ಮಷಿನ್‍ನಿಂದ ಕೊಳವೆ ಸುರಂಗ ಕೊರೆಯುವ ವೇಳೆ ಬೆಳಗಾವಿ ನಗರಕ್ಕೆ ದಿನದ 24ಗಂಟೆಗಳ ಕಾಲ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಪೈಪ್‍ಲೈನ್‍ ಒಡೆದುಹೋಗಿದೆ. ಈ ವೇಳೆ ನೀರು ರಸ್ತೆಗೆ ಚಿಮ್ಮಿದೆ.

drinking-water-pipeline-damage-in-belgavi
ಕುಡಿಯುವ ನೀರಿನ ಪೈಪ್‍ಲೈನ್‍ ಒಡೆದು ಅಪಾರ ಪ್ರಮಾಣದಲ್ಲಿ ರಸ್ತೆಗೆ ಹರಿದ ನೀರು

ಬೆಳಗಾವಿ: ಬೋರ್​ವೆಲ್​ ತೆಗೆಯುವ ಸಂದರ್ಭದಲ್ಲಿ ಲೋಕೋಪಯೋಗಿ ಅಧಿಕಾರಿಗಳ ಎಡವಟ್ಟಿನಿಂದ ಕುಡಿಯುವ ನೀರಿನ ಪೈಪ್‍ಲೈನ್‍ ಒಡೆದು ಅಪಾರ ಪ್ರಮಾಣ ನೀರು ರಸ್ತೆ ಪಾಲಾಗಿದೆ.

ನಗರದ ಗೋವಾ ವೇಸ್ ಬಳಿ ಬೋರ್​ವೆಲ್​ ಮಷಿನ್‍ನಿಂದ ಕೊಳವೆ ಸುರಂಗ ಕೊರೆಯುವ ವೇಳೆ ಬೆಳಗಾವಿ ನಗರಕ್ಕೆ ದಿನದ 24ಗಂಟೆಗಳ ಕಾಲ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಪೈಪ್‍ಲೈನ್‍ ಒಡೆದುಹೋಗಿದೆ. ಈ ವೇಳೆ ಕುಡಿಯುವ ನೀರಿನ ಪೈಪ್​ನಿಂದ ನೀರು ಕಾರಂಜಿ ರೀತಿ ಧುಮ್ಮಿಕ್ಕಿದ್ದರಿಂದ, ಬೈಕ್ ಹಾಗೂ ವಾಹನ ಸವಾರರು ರಸ್ತೆ ದಾಟಲು ಪರದಾಡುವಂತಾಯಿತು.

ಪೈಪ್‍ಲೈನ್‍ ಒಡೆದು ಅಪಾರ ಪ್ರಮಾಣದ ನೀರು ಹಾನಿ

ಓದಿ: 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO

ಪರಿಣಾಮ ರಸ್ತೆಯು ಒಂದು ರೀತಿ‌ ಕೃತಕ ನದಿಯಂತಾಗಿದ್ದು, ಇತ್ತ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.