ETV Bharat / technology

OnePlus, Samsung ಸೇರಿದಂತೆ ಈ ಫೋನ್‌ಗಳಿಗೆ ಅಮೆಜಾನ್​ ಬಿಗ್ ಆಫರ್! - Amazon Offers On Smartphones

Amazon Offers On OnePlus And Samsung Phones: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನವೇ ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ಪರಿಚಯಿಸಿದೆ. ಈ ಆಫರ್‌ಗಳು​ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯ.

SAMSUNG GALAXY S21 FE  DEALS ON ONEPLUS AND SAMSUNG PHONES  ONEPLUS 11R  AMAZON GREAT INDIAN FESTIVAL SALE
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ (OnePlus, Samsung, Amazon)
author img

By ETV Bharat Tech Team

Published : Sep 23, 2024, 10:14 AM IST

Amazon Offers On OnePlus And Samsung Phones: ಹಬ್ಬದ ಸೀಸನ್‌ಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟ ಸೆಪ್ಟೆಂಬರ್ 27ರಂದು ಶುರುವಾಗುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಟಿವಿ, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಸೇರಿ ಅನೇಕ ರೀತಿಯ ವಸ್ತುಗಳ ಮೇಲೆ ಉತ್ತಮ ಆಫರ್​ಗಳು ಲಭ್ಯವಾಗಲಿವೆ. ಮಾರಾಟದ ಸಮಯದಲ್ಲಿ ಖರೀದಿದಾರರು ಆಕರ್ಷಕ ಬ್ಯಾಂಕ್ ಕೊಡುಗೆಗಳು, ನೋ ಕಾಸ್ಟ್​ EMI ಹಾಗು ವಿನಿಮಯ ಕೊಡುಗೆಗಳನ್ನೂ ಪಡೆಯಬಹುದು.

ಮಾರಾಟ ಪ್ರಾರಂಭವಾಗುವ ಮೊದಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ OnePlus 11R ಮತ್ತು Samsung Galaxy S21 FEನಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಆಕರ್ಷಕ ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ನೀಡಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತದ ಹೊರತಾಗಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಶೇ 10ದಷ್ಟು ತ್ವರಿತ ರಿಯಾಯಿತಿ ನೀಡಲು ಅಮೆಜಾನ್ ಎಸ್‌ಬಿಐ ಜೊತೆ ಪಾಲುದಾರಿಕೆ ಹೊಂದಿದೆ.

OnePlus 11R ಡೀಲ್ ಏನು?: OnePlus 11R ಅನ್ನು ಭಾರತದಲ್ಲಿ 39,999 ರೂ ಬೆಲೆಗೆ ಬಿಡುಗಡೆ ಮಾಡಲಾಗಿದ್ದು, ಈಗ 27,999 ರೂ.ಗೆ ಖರೀದಿಸಬಹುದು. ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಖರೀದಿದಾರರು ಈ ಫೋನ್​ ಅನ್ನು 26,749 ರೂ.ಗೆ ಖರೀದಿಸಬಹುದಾಗಿದೆ.

ಹ್ಯಾಂಡ್ಸೆಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್​ನಿಂದ ಚಾಲಿತವಾಗಿದೆ. 120Hz ರಿಫ್ರೆಶ್ ರೇಟ್​ನೊಂದಿಗೆ 6.7-ಇಂಚಿನ ಸೂಪರ್ ಫ್ಲೂಯಿಡ್ AMOLED ಡಿಸ್​ಪ್ಲೇ ಹೊಂದಿದೆ. ಇದು 100W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿ ಹೊಂದಿದೆ.

Samsung Galaxy S21 FE ಆಫರ್​: Samsung Galaxy S21 FEನಲ್ಲಿ ಕಿಕ್‌ಸ್ಟಾರ್ಟರ್ ಡೀಲ್ ಸಹ ಲಭ್ಯ. ಬಿಡುಗಡೆಯ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ 74,999 ರೂ.ಗಳ MRPಯೊಂದಿಗೆ ಲಿಸ್ಟಿಂಗ್​ ಆಗಿತ್ತು. ಅಂದಿನಿಂದ ಇಂದಿನವರೆಗೆ ಇದರ ಬೆಲೆಯನ್ನು ಹಲವು ಬಾರಿ ಕಡಿತಗೊಳಿಸಲಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಈ ಹ್ಯಾಂಡ್‌ಸೆಟ್ ಅನ್ನು 26,999 ರೂ.ಗೆ ಖರೀದಿ ಮಾಡಬಹುದು. ಇದರಲ್ಲಿ 6.4-ಇಂಚಿನ ಡೈನಾಮಿಕ್ AMOLED 2X 120Hz ಡಿಸ್​ಪ್ಲೇ ಮತ್ತು 4,500mAh ಬ್ಯಾಟರಿ ಇದೆ.

ಇವುಗಳ ಹೊರತಾಗಿ, 20,999 ರೂ ಬೆಲೆಯ OnePlus Nord CE 4 Lite 5G ಅನ್ನು ಎಲ್ಲಾ ಬ್ಯಾಂಕ್ ಆಫರ್​ ಒಳಗೊಂಡಂತೆ 17,999 ರೂ.ಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 80W SuperVOOC ಚಾರ್ಜಿಂಗ್‌ನೊಂದಿಗೆ 5,500mAh ಬ್ಯಾಟರಿ ಹೊಂದಿದೆ.

iQOO Z9s Pro 5G, Realme Narzo 70 Turbo 5G ಮತ್ತು Lava Blaze Curve ನಂತಹ ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಇದೇ ರೀತಿಯ ಡೀಲ್‌ಗಳು ಲಭ್ಯವಿವೆ. ಖರೀದಿದಾರರು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ ಮೊದಲು ಅವುಗಳನ್ನು ಖರೀದಿಸಬಹುದು. ಇದು ಪ್ರೈಮ್ ಸದಸ್ಯರಿಗೆ ಸೆಪ್ಟಂಬರ್ 26ರಿಂದ ಮತ್ತು ಉಳಿದೆಲ್ಲ ಬಳಕೆದಾರರಿಗೆ ಒಂದು ದಿನದ ನಂತರ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಈ ದೇಶದಲ್ಲಿ ಪೆಟ್ರೋಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳೇ ಹೆಚ್ಚು - Electric Cars Overtake Petrol Cars

ETV Bharat Logo

Copyright © 2024 Ushodaya Enterprises Pvt. Ltd., All Rights Reserved.