ETV Bharat / state

ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ - Acid Attack

author img

By ETV Bharat Karnataka Team

Published : 2 hours ago

ಬೆಂಗಳೂರನಲ್ಲಿ ಯುವಕನ ಮೇಲೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ.

ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ
ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ (ETV Bharat)

ಬೆಂಗಳೂರು: ಯುವಕನ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಆ್ಯಸಿಡ್ ಅಂಶಗಳುಳ್ಳ ಬಾತ್ ರೂಮ್ ಕ್ಲೀನರ್ ಎರಚಿರುವ ಘಟನೆ ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸಣ್ಣಕ್ಕಿ ಬಯಲಿನ ಬಾಲಾಜಿ ವೈನ್ಸ್ ಸ್ಟೋರ್ ಬಳಿ ನಡೆದಿದೆ. ಆ್ಯಸಿಡ್ ದಾಳಿಯಿಂದ ನಾಗೇಶ್ ಕೊಂಡಾ (21) ಎಂಬವರ ಮುಖಕ್ಕೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ.

ವೃಷಭಾವತಿ ನಗರದಲ್ಲಿರುವ ಇಂಡಸ್ಟ್ರೀಸ್ ಕಂಪನಿಯೊಂದರಲ್ಲಿ ಫಿಟ್ಟರ್ ಆಗಿ ನಾಗೇಶ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಬಾರ್​ಗೆ ಬಂದು ಮದ್ಯಪಾನ ಮಾಡಿ, ಊಟ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಬಾರ್ ಬಳಿ ಬಂದ ದುಷ್ಕರ್ಮಿ ನಾಗೇಶ್ ಮುಖಕ್ಕೆ ಕೆಮಿಕಲ್ ಎರಚಿ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವಿನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಗಾಯಾಳುವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾರವಾರ: ಮೃತದೇಹವನ್ನು ಕಟ್ಟಿಗೆಗೆ ಕಟ್ಟಿ ಹೊತ್ತುಕೊಂಡು ಊರಿಗೆ ಸಾಗಿಸಿದ ಗ್ರಾಮಸ್ಥರು - No Road Facilities

ETV Bharat Logo

Copyright © 2024 Ushodaya Enterprises Pvt. Ltd., All Rights Reserved.