ETV Bharat / state

ನೈತಿಕತೆ ಜೊತೆ ಪರಿಶ್ರಮದಿಂದ ಸಾಧನೆ ಮಾಡಿ: ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಸುಧಾಮೂರ್ತಿ ಕಿವಿಮಾತು - ಈಟಿವಿ ಭಾರತ ಕನ್ನಡ

'ದಿ ಇನಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್' ವತಿಯಿಂದ ಹಮ್ಮಿಕೊಂಡಿದ್ದ ಸಿವಿಲ್​ ಇಂಜಿನಿಯರ್ಸ್​ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಾ.ಸುಧಾಮೂರ್ತಿ, ಸಿವಿಲ್​ ಇಂಜಿನಿಯರಿಂಗ್​ ಕುರಿತು ಮಾತನಾಡಿದರು.

Dr SudhaMurthy
ಸುಧಾಮೂರ್ತಿ
author img

By ETV Bharat Karnataka Team

Published : Oct 9, 2023, 7:58 AM IST

ಬೆಳಗಾವಿ: ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಿವಿಲ್​ ಇಂಜಿನಿಯರಿಂಗ್​ಗೆ ಮಹತ್ವದ ಸ್ಥಾನವಿದೆ. ಹಾಗಾಗಿ, ಸಿವಿಲ್​ ಇಂಜಿನಿಯರಿಂಗ್​ ಎಂಬುದು ಮದರ್​ ಆಫ್​ ಇಂಜಿನಿಯರ್ಸ್​ ಎಂದು ಇನ್ಫೋಸಿಸ್‌ ಫೌಂಡೇಷನ್​ ಮುಖ್ಯಸ್ಥೆ, ಪದ್ಮಭೂಷಣ ಪುರಸ್ಕೃತೆ ಡಾ.ಸುಧಾಮೂರ್ತಿ ಹೇಳಿದರು.

ಬೆಳಗಾವಿಯ ಕೆಎಲ್​ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆದ 'ದಿ ಇನಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್' ವತಿಯಿಂದ ಹಮ್ಮಿಕೊಂಡಿದ್ದ ಸಿವಿಲ್​ ಇಂಜಿನಿಯರ್ಸ್​ 38ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿವಿಲ್​ ಇಂಜಿನಿಯರಿಂಗ್​ ಕುರಿತು ಬಣ್ಣಿಸಿದರು.

"ಹಣವೇ ಎಲ್ಲ ಖುಷಿ ಕೊಡುತ್ತದೆ ಎಂಬುದು ಸರಿಯಲ್ಲ. ಹಾಗಂತ ಹಣದಿಂದ ಖುಷಿ ಸಿಗಲ್ಲ ಎಂದೇನಿಲ್ಲ. ಆದರೆ, ಹಣಕ್ಕಿಂತ ಹೆಚ್ಚಾಗಿ ಕಾಂಬಿನೇಷನ್​ ಬೇಕು. ವೃತ್ತಿ ನೈತಿಕತೆ ಜೊತೆಗೆ ಪರಿಶ್ರಮ ಬೇಕು. ಹೀಗಿದ್ದಾಗ ಮಾತ್ರ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅದರಿಂದ ಯಶಸ್ಸು ಲಭಿಸುವುದು ಖಂಡಿತ" ಎಂದು ನುಡಿದರು.

"ಎಲ್ಲದರಲ್ಲೂ ಪರಿಶ್ರಮ, ನೈತಿಕತೆ ಜೊತೆಗೆ ಟೀಮ್​ ವರ್ಕ್​ ಕೂಡ ಮುಖ್ಯ. ತಂಡದಲ್ಲಿ ಒಬ್ಬರು ಮುಂದಿರಬಹುದು, ಮತ್ತೊಬ್ಬರು ಹಿಂದಿರಬಹುದು. ಹೀಗಿರುವಾಗ ವೃತ್ತಿ ನೈತಿಕತೆ ಬೇಕು, ಹಣ ಇಲ್ಲದಿದ್ದರೆ ನಮ್ಮ ವೇಗ ಕಡಿಮೆ ಆಗಬಹುದು. ಆದರೆ ಗುಣಮಟ್ಟ ಮತ್ತು ನೈತಿಕವಾಗಿ ಶ್ರಮಿಸಿದರೆ ಹಣ ಎಂಬುದು ನಮ್ಮ ಬಳಿಗೆ ಓಡಿ ಬರುತ್ತದೆ. ಹೀಗಾಗಿ ಹಾರ್ಡ್​ವರ್ಕ್​ ಜೊತೆಗೆ ನೈತಿಕತೆ ಬೆಳೆಸಿಕೊಂಡು ಕೆಲಸ ಮಾಡಿ, ಸಾಧನೆ ಮಾಡಿ. ನಿಮ್ಮ ಪರಿಶ್ರಮಕ್ಕೆ ಯಶಸ್ಸು ಖಂಡಿತ" ಎಂದು ಯುವ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಸುಧಾಮೂರ್ತಿ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಹಣ, ಪ್ರಶಸ್ತಿಗೋಸ್ಕರ ಕೆಲಸ ಮಾಡಬೇಡಿ: ಸುಧಾಮೂರ್ತಿ

"ಗುಣಮಟ್ಟ ಆಹಾರವಿದ್ದು ನೀರು ಕಳಪೆಯಾಗಿದ್ದರೆ ಯಾವುದೇ ಪ್ರಯೋಜನ ಇಲ್ಲ. ಏನೇ ಅಭಿವೃದ್ಧಿ ಆದರೂ ನೀರು ಅತೀ ಮುಖ್ಯ. ನೀರು ಜೀವವೇ ಸರಿ. ಎಲ್ಲಿಯೋ ಹೋಗಿ ಏನು ಬೇಕಾದರೂ ಸಾಧಿಸಬಹುದು. ಆದರೆ ನೀರಿಲ್ಲದೇ ಏನನ್ನೂ ಮಾಡಲು ಆಗುವುದಿಲ್ಲ. ಅನ್ಯಗ್ರಹದಲ್ಲಿ ನಾವು ಸಾಕಷ್ಟು ಸಾಧನೆ ಮಾಡಬಹುದು. ಆದರೆ ನಮಗೆ ಮುಖ್ಯವಾಗಿ ನೀರು ಅತ್ಯವಶ್ಯಕವಾಗಿ ಬೇಕು. ಅಂದಾಗ ಮಾತ್ರ ಉಳಿದವುಗಳೆಲ್ಲವನ್ನೂ ಗಳಿಸಲು ಸಾಧ್ಯ" ಎಂದು ತಿಳಿಸಿದರು.

ಸಿವಿಲ್​ ಇಂಜಿನಿಯರ್ಸ್​ 38ನೇ ರಾಷ್ಟ್ರೀಯ ಸಮಾವೇಶ ಕಾರ್ಯಕ್ರಮದಲ್ಲಿ ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್​ ಕೋರೆ, ಡಾ. ಟಿ.ಜಿ ಸೀತಾರಾಮ್​, ಶಿವಾನಂದ ರಾಯ್​, ಧಾರವಾಡ ಐಐಟಿ ಪ್ರೊ.ವೆಂಕಪ್ಪಯ್ಯ ದೇಸಾಯಿ, ಆರ್​.ಟಿ.ಜಂಗಲ್​, ಸಿ.ಬಿ.ಹಿರೇಮಠ, ಎಂ ನಾಗಾರಾಜ, ಮಾಧವ್​ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Watch.. ಮಕ್ಕಳಿಗೆ 14 ವರ್ಷದವರೆಗೂ ಓದುವ ಹವ್ಯಾಸ ರೂಢಿಸಿ: ಸುಧಾಮೂರ್ತಿ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.