ETV Bharat / state

ಸಾಲ ಮರುಪಾವತಿಗೆ ಒತ್ತಾಯಿಸಬೇಡಿ: ಬ್ಯಾಂಕ್​ಗಳಿಗೆ ಬೆಳಗಾವಿ ಡಿಸಿ ಖಡಕ್​ ಎಚ್ಚರಿಕೆ

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕ್​ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದರು. ಇದೇ ವೇಳೆ ಅನೇಕ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.

ಬೆಳಗಾವಿ ಡಿಸಿ ಎಚ್ಚರಿಕೆ
author img

By

Published : Aug 14, 2019, 3:23 PM IST

ಬೆಳಗಾವಿ: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅವಧಿಯನ್ನು ವಿಸ್ತರಿಸಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದು, ಆ ಪ್ರಕಾರ ಬ್ಯಾಂಕುಗಳು ರೈತರಿಂದ ಕಂತು ಭರಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕ್​ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆ ಪ್ರಕಾರ ಬ್ಯಾಂಕುಗಳು ಹಾಗೂ ಬೆಳೆ ವಿಮಾ ಕಂಪನಿಗಳು ರೈತರಿಂದ ಕಂತುಗಳನ್ನು ಭರಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಮರುಪಾವತಿಗೆ ಒತ್ತಾಯಿಸದಂತೆ ಡಿಸಿ ಎಚ್ಚರಿಕೆ: ರೈತರು ಈಗಾಗಲೇ ಅನೇಕ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬ್ಯಾಂಕ್​ಗಳಿಗೆ ಎಚ್ಚರಿಕೆ ನೀಡಿದರು. ರೈತರು ಸೇರಿದಂತೆ ಇತರೆ ಸಾಲಗಾರರಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಪಾಸ್ತಿಗಳನ್ನು ಹರಾಜು ಮಾಡುವುದಾಗಲಿ ಅಥವಾ ಹೊಸದಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ತಿಳಿಸಿದರು.

ಪರಿಹಾರ ಚೆಕ್​ಗಳನ್ನು ಅಕೌಂಟ್ ಪೇಯಿ ಚೆಕ್ ನೀಡಲಾಗಿದ್ದು, ಅಂತಹ ಚೆಕ್​ಗಳನ್ನು ತಕ್ಷಣ ನಗದೀಕರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು. ಒಂದು ವೇಳೆ ಯಾವುದೇ ರೀತಿಯ ವಿಮೆ ಅಥವಾ ಪರಿಹಾರ ಹಣವನ್ನು ಸಾಲ ಪಾವತಿಗೆ ತೆಗೆದುಕೊಂಡರೆ ಅಂತಹ‌ ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಖಡಕ್​ ಎಚ್ಚರಿಕೆ ನೀಡಿದ್ರು.

Intro:Body:

ಸಾಲ ಮರುಪಾವತಿಗೆ ಒತ್ತಾಯಿಸಬೇಡಿ- ಬೆಳಗಾವಿ ಡಿಸಿ ಎಚ್ಚರಿಕೆ

ಬೆಳಗಾವಿ:  ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅವಧಿಯನ್ನು ವಿಸ್ತರಣೆ ಮಾಡಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದು, ಆ ಪ್ರಕಾರ ಬ್ಯಾಂಕುಗಳು ರೈತರಿಂದ ಕಂತು ಭರಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕುಗಳು ಹಾಗೂ ವಿಮಾ ಕಂಪೆನಿಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆ ಪ್ರಕಾರ ಬ್ಯಾಂಕುಗಳು ಹಾಗೂ ಬೆಳೆವಿಮಾ ಕಂಪನಿಗಳು ರೈತರಿಂದ ಕಂತುಗಳನ್ನು ಭರಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಮರುಪಾವತಿಗೆ ಒತ್ತಾಯಿಸದಂತೆ ಡಿಸಿ ಎಚ್ಚರಿಕೆ:

ರೈತರು ಈಗಾಗಲೇ ಅನೇಕ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು. ರೈತರು ಸೇರಿದಂತೆ ಇತರೆ ಸಾಲಗಾರರಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಪಾಸ್ತಿಗಳ ಹರಾಜು ಮಾಡುವುದಾಗಲಿ ಅಥವಾ ಹೊಸದಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ತಿಳಿಸಿದರು.

ಪರಿಹಾರ ಚೆಕ್ ಗಳನ್ನು ಅಕೌಂಟ್ ಪೇಯಿ ಚೆಕ್ ನೀಡಲಾಗಿದ್ದು, ಅಂತಹ ಚೆಕ್ ಗಳನ್ನು ತಕ್ಷಣ ನಗದೀಕರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.

ಒಂದು ವೇಳೆ ಯಾವುದೇ ರೀತಿಯ ವಿಮೆ ಅಥವಾ ಪರಿಹಾರ ಹಣವನ್ನು ಸಾಲ ಪಾವತಿಗೆ ತೆಗೆದುಕೊಂಡರೆ ಅಂತಹ‌ ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.