ಬೆಳಗಾವಿ: ಪರಿಷತ್ತಿನಿಂದ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿದ್ದು, ಕೆಟ್ಟ ಪದ್ಧತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಾರ್ಲಿಮೆಂಟ್ನಲ್ಲಿ ಮಾಡಿದ್ದಂತೆ ಇಲ್ಲಿಯೂ ಮಾಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ. ಕಾಂಗ್ರೆಸ್ ಪಕ್ಷದ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ಕುರಿತಂತೆ ನಾಳೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಚರ್ಚೆ ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ ಎಂದರು.
ಆರೋಪಗಳು ಬಂದ ಸದಸ್ಯರ ಮೇಲೆ ಹಿಂದೆ ಸದನದಲ್ಲಿ ಚರ್ಚೆ ಮಾಡಿಲ್ವಾ?, ಕಾನೂನು ಪ್ರಕಾರ ನೋಟಿಸ್ ಕೊಡಬೇಕು. ಉತ್ತರ ಹೇಳಿ ನಾವು ಆರೋಪಿ ಅಂತ ಹೇಳಿದ್ವಾ, ಯಡಿಯೂರಪ್ಪ ಮೇಲೆ ಕೇಸ್ ಆಯ್ತು ಅವರು ಜೈಲಿಗೆ ಹೋದ ತಕ್ಷಣ ಆರೋಪಿಯಾದರಾ, ಅಕ್ರಮ ಮಾಡಿದವರು ಸಚಿವರ ಮೇಲೆ ಗಂಭೀರ ಆರೋಪ ಬಂದಾಗ ಹಿಂದೆ ಯಾವ ರೀತಿ ನಡೆದುಕೊಂಡಿದ್ದರೋ ಅದೇ ರೀತಿ ನಡೆದುಕೊಳ್ಳಬೇಕು ಎಂದು ಪರೋಕ್ಷವಾಗಿ ಭೈರತಿ ಬಸವರಾಜ್ ರಾಜೀನಾಮೆಗೆ ಒತ್ತಾಯಿಸಿದರು.
ಇದನ್ನೂ ಓದಿ: ಸಭಾಪತಿಗಳು ರೂಲಿಂಗ್ ಕೊಟ್ಟ ಮೇಲೆ ನಾನು ಏನೂ ಮಾತನಾಡಲ್ಲ: ಸಿಎಂ ಬೊಮ್ಮಾಯಿ