ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಗುಂಪು, ನಮ್ಮ ಗುಂಪು ಬೇರೆ ಬೇರೆ ಇರಬಹುದು. ಆದರೆ, ಚುನಾವಣೆ ಬಂದಾಗ ನಾವೆಲ್ಲಾ ಒಂದಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನನ್ನ ಮೌನ ನನ್ನ ವೀಕ್ನೆಸ್ ಅಲ್ಲಾ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್ ಅವರದ್ದೂ, ನಮ್ದು ಏನೂ ಇಲ್ಲ. ಸುತ್ತಿ ಹಾಕಿ ಯಾಕೆ ಹೆಬ್ಬಾಳ್ಕರ್‌ಗೆ ತೆಗೆದುಕೊಂಡು ಹೋಗ್ತೀರಾ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ವಿರೋಧ ಮಾಡೊದಾದ್ರೆ ಎಂಎಲ್ಸಿ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡುತ್ತಿರಲಿಲ್ಲ. ನಮ್ಮ ಗುಂಪು ಬೇರೆ ಬೇರೆ ಇರಬಹುದು. ಇನ್ನು ಸರ್ಕಾರದಲ್ಲಿ ಎಲ್ಲಾ ನಾವು ಹೇಳಿದ್ದು ಆಗಬೇಕೆಂದಿಲ್ಲ. ಒಂದೊಂದು ಸಲ ಫೇಲ್ ಆಗುತ್ತೆ ಎಲ್ಲರ ಮಾತೂ ನಾಯಕರು ಕೇಳಬೇಕಾಗುತ್ತೆ ಖಡಕ್ಕಾಗಿಯೇ ಮಾತನಾಡಿದರು.
ಸತೀಶ ಜಾರಕಿಹೊಳಿಯವರ ಮೌನ ಮಿಸ್ ಯೂಸ್ ಆಗ್ತಿದೆ ಎಂಬ ಪ್ರಶ್ನೆಗೆ, ವರ್ಗಾವಣೆ ಅದೊಂದು ದೊಡ್ಡ ಸಾಧನೆ ಅಲ್ಲಾ. ಯಾವ ಅಧಿಕಾರಿಗಳಿದ್ದರೂ ಸಹ ಕೆಲಸ ಮಾಡುತ್ತೇವೆ. ಯಾರೇ ಇದ್ದರೂ ಸರ್ಕಾರದ ಪರವಾಗಿ ಕೆಲಸ ಮಾಡಬೇಕು. ವರ್ಗಾವಣೆ ವಿಚಾರದಲ್ಲಿ ನಾವು ಸೀರಿಯಸ್ ಆಗಿರಲ್ಲ ಎಂದರು.
ಬೆಳಗಾವಿಯಿಂದ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ, ನಮ್ಮ ಸರ್ಕಾರ ಇದ್ದೆ ಇರುತ್ತೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳಲ್ಲ. ಸ್ವಲ್ಪ ಗಾಳಿ ಬಿಟ್ಟಾಗ ವಿಮಾನ ಅಲುಗಾಡುತ್ತೆ. ಈಗ ಅಲುಗಾಡಿ ಶಾಂತವಾಗಿದೆ ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ ಎಂದು ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
ಅಧಿವೇಶನ ಬಂದಾಗ ಒಬ್ಬರು ಗೋವಾ, ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನಕ್ಕೆ ಹೋಗ್ತಾರೆ. ಇನ್ಯಾರೋ ಹುಬ್ಬಳ್ಳಿಗೆ ಹೋಗ್ತಾರೆ, ಕೆಲವರು ನಮ್ಮ ಜತೆಗೆ ಊಟಕ್ಕೆ ಬರ್ತಾರೆ. ಈ ಸಾರಿ ಅಧಿವೇಶನದಲ್ಲಿ ಇದೆಲ್ಲವೂ ವಿಶೇಷ ಆಗೋದು ನಾವೇನೂ ಮಾಡಲು ಆಗಲ್ಲ. ರಾಜಕೀಯದಲ್ಲಿ ಕುಸ್ತಿ ಇದ್ದೆ ಇರುತ್ತೆ. ಸರ್ಕಾರ ಬೀಳಿಸುವ ಪ್ರಶ್ನೆ ಉದ್ಭವ ಆಗಲ್ಲ. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 4ರಿಂದ 15ರ ವರೆಗೂ ಅಧಿವೇಶನ ನಡೆಯಲಿದ್ದು, ಈಗಾಗಲೇ ಜಿಲ್ಲಾಡಳಿತಕ್ಕೆ ತಯಾರಿ ಮಾಡಲು ಸೂಚನೆ ನೀಡಿದ್ದೇವೆ. ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಬಾರಿ ಅಧಿವೇಶನ ಅದ್ದೂರಿಯಾಗಿ ಮಾಡೋಣ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ: 'ನನ್ನ ಮೌನವೂ ವೀಕ್ನೆಸ್ ಅಲ್ಲ': ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್