ETV Bharat / state

ಕೆಲ ಹೊತ್ತಲ್ಲೇ ಪ್ರವಾಸಿ ಮಂದಿರಕ್ಕೆ ಅಮಿತ್​ ಶಾ ಆಗಮನ : ಅತೃಪ್ತರ ದೌಡು - MLA Aravind Bellada reaction

ಭೋಜನದ ಬಳಿಕ ಶಾ ಭೇಟಿಗೆ ಅವಕಾಶ ನೀಡಿದ್ರೆ ಅತೃಪ್ತ ಶಾಸಕರು ಇಲ್ಲೇ ಭೇಟಿಯಾಗಿ ಅಳಲು ತೋಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸರ್ಕ್ಯೂಟ್ ಹೌಸ್‌ನಿಂದ ಹೊರ ಬಂದು ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಸಿ ಪಿ ಯೋಗೇಶ್ವರ್ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿತು. ಪ್ರವಾಸಿ ಮಂದಿರದಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಅಮಿತ್ ಶಾ ಮಹತ್ವದ ಮಾತುಕತೆ ನಡೆಸಿದರು..

Belgavi
ಪ್ರವಾಸಿ ಮಂದಿರಕ್ಕೆ ಅಮಿತ್​ ಶಾ ಆಗಮನ: ಅತೃಪ್ತರ ದೌಡು
author img

By

Published : Jan 17, 2021, 2:56 PM IST

Updated : Jan 17, 2021, 3:13 PM IST

ಬೆಳಗಾವಿ : ಕೆಲವೇ ಹೊತ್ತಲ್ಲಿ ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಅವರ ಆಗಮನಕ್ಕೂ ಮುನ್ನವೇ ಸಚಿವರ ದಂಡು ಹಾಗೂ ಅತೃಪ್ತ ಕೆಲ ಶಾಸಕರು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

ಪ್ರವಾಸಿ ಮಂದಿರಕ್ಕೆ ಅತೃಪ್ತರ ದೌಡು

ಡಿಸಿಎಂಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌, ನೂತನ ಸಚಿವ ಸಿ ಪಿ ಯೋಗೇಶ್ವರ್, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಹಾಗೂ ಸಿ ಟಿ ರವಿ ಆಗಮಿಸಿದ್ದಾರೆ.

ಅಲ್ಲದೇ ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅನಿಲ್ ಬೆನಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ‌ಕುಮಾರ್ ಕಟೀಲ್, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಸೇರಿ ಬಿಜೆಪಿ ಮುಖಂಡರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ.

ಭೋಜನದ ಬಳಿಕ ಶಾ ಭೇಟಿಗೆ ಅವಕಾಶ ನೀಡಿದ್ರೆ ಅತೃಪ್ತ ಶಾಸಕರು ಇಲ್ಲೇ ಭೇಟಿಯಾಗಿ ಅಳಲು ತೋಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸರ್ಕ್ಯೂಟ್ ಹೌಸ್‌ನಿಂದ ಹೊರ ಬಂದು ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಸಿ ಪಿ ಯೋಗೇಶ್ವರ್ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿತು. ಪ್ರವಾಸಿ ಮಂದಿರದಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಅಮಿತ್ ಶಾ ಮಹತ್ವದ ಮಾತುಕತೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ಸಾಧ್ಯತೆ ಇದೆ.

ಅಸಮಾಧಾನ ಬಗ್ಗೆ ಚರ್ಚೆ ಮಾಡಲ್ಲ : ಬೆಲ್ಲದ

ಇಲ್ಲಿ ಅಸಮಾಧಾನ ಬಗ್ಗೆ ಚರ್ಚೆ ಮಾಡಲ್ಲ, ಜನಸೇವಕ ಸಮಾರೋಪದಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ. ದೆಹಲಿಗೆ ಹೋಗಿ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಓದಿ: ಬೆಳಗಾವಿ ಅವರದಂತೆ.. ಶಾ ಆಗಮನ ಹಿನ್ನೆಲೆ ಎಂಇಎಸ್ ಕಾರ್ಯಕರ್ತರ ಉದ್ಧಟತನ!

ನಗರದ ಯುಕೆ 27 ಹೋಟೆಲ್​ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿ ಕೆಲ ಶಾಸಕರು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅಸಮಾಧಾನಿತ ಶಾಸಕರು ಚರ್ಚೆ ಮಾಡಿದ್ದೇವೆ. ಎಷ್ಟು ಜನ ಶಾಸಕರು ದೆಹಲಿಗೆ ಹೋಗುತ್ತಿರಾ ಎನ್ನುವ ಪ್ರಶ್ನೆಗೆ, ಈಗಲೇ ಹೇಳಲು ಆಗಲ್ಲ ಎಂದು ಹೇಳಿದರು.

Last Updated : Jan 17, 2021, 3:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.