ETV Bharat / state

ಅಮಿತ್‌ ಶಾ ಸ್ವಾಗತ ವಿಚಾರ: ಬೆಳಗಾವಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಗಲಾಟೆ - dissatisfaction in Belgavi BJP

ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಶಾ ಅವರನ್ನು ಬರ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಮಧ್ಯೆ ಗಲಾಟೆ ನಡೆದಿದೆ.

belgavi
ಬಿಜೆಪಿಯಲ್ಲಿ ಅಸಮಾಧಾನ
author img

By

Published : Jan 17, 2021, 11:41 AM IST

Updated : Jan 17, 2021, 12:21 PM IST

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನಕ್ಕೂ ಮುನ್ನವೇ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ಶಾ ಅವರನ್ನು ಬರಮಾಡಿಕೊಳ್ಳುವ ವಿಚಾರದಲ್ಲಿ ಮಹಿಳಾ ಕಾರ್ಯಕರ್ತೆಯರ ಮಧ್ಯೆ ಗಲಾಟೆ ನಡೆದಿದೆ.

ಬಿಜೆಪಿಯಲ್ಲಿ ಅಸಮಾಧಾನ

ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಡಾ. ಸೋನಾಲಿ ಸರನೋಬಾತ್ ಅವರನ್ನು ಅಮಿತ್ ಶಾ ಸ್ವಾಗತಕ್ಕಾಗಿ ವಿಮಾನ ನಿಲ್ದಾಣದೊಳಗೆ ಬಿಡಲಾಗಿದೆ. ಇದಕ್ಕೆ ಮೂಲ ಬಿಜೆಪಿ ಕಾರ್ಯಕರ್ತೆ ದೀಪಾ ಕುಡಚಿ ಆಕ್ಷೇಪ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ. ಮಾಜಿ ಸಚಿವ ಶಶಿಕಾಂತ್ ನಾಯಕ್, ನಾನು ಸೇರಿ ಹಲವು ಕಾರ್ಯಕರ್ತರನ್ನು ಏರ್‌ಪೋರ್ಟ್ ಹೊರಗೆ ನಿಲ್ಲಿಸಲಾಗಿದೆ. ಪಕ್ಷದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಕುಡಚಿ ಬಹಿರಂಗವಾಗಿ ಗ್ರಾಮೀಣ ಅಧ್ಯಕ್ಷ ಸಂಜಯ್ ಪಾಟೀಲ ವಿರುದ್ಧ ಗರಂ ಆದರು.

ಅಲ್ಲದೇ ದೀಪಾ ಕುಡಚಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ನಾವು 20 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪಕ್ಷಕ್ಕೆ ಬಂದ ಡಾ.ಸೋನಾಲಿ ಸೋರ್ನಾಬತ್​ರನ್ನು ಏರ್‌ಪೋರ್ಟ್ ಒಳಗೆ ಬಿಟ್ಟಿದ್ದಾರೆ. ರಾತ್ರೋರಾತ್ರಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ರಾಜ್ಯ ಘಟಕದಿಂದ ಬಂದಿರುವ ಲಿಸ್ಟ್ ಚೇಂಜ್ ಮಾಡಿದ್ದಾರೆ.

ಮಾಜಿ ಸಚಿವ ಶಶಿಕಾಂತ್ ನಾಯಕ್‌ರಂತಹ ಹಿರಿಯ ನಾಯಕರು ಹೊರಗೆ ನಿಂತಿದ್ದಾರೆ. ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇವೆ. ಅವಕಾಶ ಸಿಕ್ಕರೆ ಅಮಿತ್ ಶಾ ಸೇರಿ ಇತರೆ ವರಿಷ್ಠರಿಗೆ ದೂರು ನೀಡ್ತೇವೆ. ಹೀಗೆ ಕಡೆಗಣಿಸಿದರೆ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ದೀಪಾ ಕುಡಚಿ ಅಸಮಾಧಾನ ವ್ಯಕ್ತಪಡಿಸಿದರು.

ಅಮಿತ್​ ಶಾ ಭೇಟಿಗೆ ಬಂದ ಜಿ.ಪಂ ಅಧ್ಯಕ್ಷೆ

ಜಿ.ಪಂ ಅಧ್ಯಕ್ಷೆಗೆ ಸಿಗಲಿಲ್ಲ ಅಮಿತ್​ ಶಾ ಭೇಟಿ ಅವಕಾಶ:

ಅಮಿತ್ ಶಾ ಭೇಟಿಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಮತ್ತು ಬೆಳಗಾವಿ ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆಗೆ ತೀವ್ರ ನಿರಾಸೆಯಾಗಿದೆ. ಶಾ ಭೇಟಿಗೆ ಅವಕಾಶ ಸಿಗದಿರುವ ಕಾರಣ ಆಶಾ ಐಹೊಳೆ ವಾಪಸ್ ತೆರಳಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರನ್ನು ಬಾಗಿಲಲ್ಲೇ ತಡೆದ ಪೊಲೀಸರು ಅನುಮತಿ ಪತ್ರ ಕೇಳಿದ್ರು. ಆದ್ರೆ, ಇವರ ಬಳಿ ಯಾವುದೇ ಅನುಮತಿ‌ ಪತ್ರ ಇರದ ಕಾರಣ ಭೇಟಿಗೆ ಅವಕಾಶ ಸಿಗಲಿಲ್ಲ.

Last Updated : Jan 17, 2021, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.