ಬೆಳಗಾವಿ: ಸವದತ್ತಿ ಕ್ಷೇತ್ರದ ಶಾಸಕ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿರುವ ಯಡ್ರಾವಿ ರಸ್ತೆಯಲ್ಲಿರುವ ಚಂದ್ರಮಾ ಫಾರ್ಮ್ ಹೌಸ್ ನಲ್ಲಿ ತಮ್ಮ ತಂದೆ ಚಂದ್ರಶೇಖರ ಮಾಮನಿ ಸಮಾಧಿ ಪಕ್ಕದಲ್ಲಿ ಆನಂದ ಮಾಮನಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಆನಂದ ಮಾಮನಿ ಅವರ ಇಬ್ಬರು ಧರ್ಮಪತ್ನಿಯರು ಮಕ್ಕಳು ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.
ಇದರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಸಚಿವ ಸಿ. ಸಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಹೇಶ ತೆಂಗಿನಕಾಯಿ, ಕಾಂಗ್ರೆಸ್ ಮುಖಂಡ ಎನ್. ಹೆಚ್ ಕೋನರೆಡ್ಡಿ ಸೇರಿದಂತೆ ಇತರ ರಾಜಕೀಯ ಮುಖಂಡರ ವಿವಿಧ ಮಠಾಧೀಶರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಇದಕ್ಕೂ ಮೊದಲು ಸವದತ್ತಿ ಪಟ್ಟಣದ ರಾಮಾಪೂರ ಸೈಟ್ನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ಆನಂದ ಮಾಮನಿ ಅವರ ಪಾರ್ಥಿವ ಶರೀರವನ್ನು ಸವದತ್ತಿ ಪಟ್ಟಣದ ವಿವಿಧ ಓಣಿ, ಗಲ್ಲಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಯಿತು.
ಓದಿ: ಆನಂದ್ ಮಾಮನಿ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ: ಭಾವುಕ ನುಡಿಗಳನ್ನಾಡಿದ ಸಿಎಂ