ಬೆಳಗಾವಿ : ಕಾನೂನು ಉಲ್ಲಂಘಿಸಿ ಮಟಕಾ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು 6 ತಿಂಗಳ ಕಾಲ ಬೆಳಗಾವಿಯಿಂದ ಹಾವೇರಿಗೆ ಗಡಿಪಾರು ಮಾಡಿ ಡಿಸಿಪಿ ವಿಕ್ರಮ ಆಮಟೆ ಆದೇಶ ಹೊರಡಿಸಿದ್ದಾರೆ. ಉದ್ಯಮಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಜಗಾಂವಿಯ ರಾಯಣ್ಣನಗರ ನಿವಾಸಿ ಅಬ್ದುಲ್ ಮುನಾಫ್ ತಿಗಡಿ ಎಂಬಾತನಿಗೆ ಜೂನ್ 17ರಿಂದ ಡಿಸೆಂಬರ್ 16ರವರೆಗೆ ಗಡಿಪಾರು ಮಾಡಲಾಗಿದೆ.
ದಿನಗೂಲಿ ನೌಕರರೇ ಹೆಚ್ಚಿರುವ ಮಜಗಾಂವಿ ಭಾಗದ ಜನರನ್ನು ಮಟಕಾ ಆಡಲು ಈತ ಪ್ರೆರೇಪಿಸಿಸುತ್ತಿದ್ದನು. ಬಹುತೇಕ ನಿವಾಸಿಗಳ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಈತ ಕಾರಣನಾಗಿದ್ದಾನೆ.

ಇದನ್ನೂ ಓದಿ: FB ನಕಲಿ ಖಾತೆ ಮೂಲಕ ಹಣಕ್ಕೆ ಬೇಡಿಕೆ: ಹುಬ್ಬಳ್ಳಿಯ 15,000ಕ್ಕೂ ಹೆಚ್ಚು ಮಂದಿ ಮೋಸದ ಜಾಲಕ್ಕೆ!
2011ರಿಂದ ಈವರೆಗೆ ಈತನ ಮೇಲೆ 11 ಪ್ರಕರಣ ದಾಖಲಾಗಿವೆ. ನ್ಯಾಯಾಲಯದಿಂದ ಶಿಕ್ಷೆಯೂ ಆಗಿದೆ. ಹೀಗಿದ್ದರೂ ತನ್ನ ಚಟ ಬಿಡದೆ ಮಜಗಾಂವಿಯಲ್ಲಿ ಕಾನೂನು ಬಾಹಿರವಾಗಿ ಮಟಕಾ ದಂಧೆ ನಡೆಸುತ್ತಿದ್ದ. ಹೀಗಾಗಿ, ಈತನನ್ನು ಗಡಿಪಾರು ಮಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದಂತಾಗಿದೆ.