ETV Bharat / state

ಬೆಳಗಾವಿಯ ಖಾಸಗಿ ಎಪಿಎಂಸಿ ಕಟ್ಟಡ ನೆಲಸಮ ಮಾಡಿ: ಸರ್ಕಾರಿ ಎಪಿಎಂಸಿ ಪುನಃ ಆರಂಭಿಸಿ

ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿಯಲ್ಲಿ ಸರ್ಕಾರಿ ಎಪಿಎಂಸಿ ಪುನಃ ಆರಂಭಿಸಿ

author img

By

Published : Jul 7, 2023, 3:37 PM IST

ಬೆಳಗಾವಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ

ಬೆಳಗಾವಿ : ಇಂದು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಜೈ ಕಿಸಾನ್ ಹೊಲ್​ ಸೆಲ್ ವೆಜಿಟೇಬಲ್ ಮಾರುಕಟ್ಟೆಗೆ ನೀಡಿದ ಪರವಾನಗಿ ರದ್ದು ಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಘ ಆಗ್ರಹಿಸಿತು.

ಜೈ ಕಿಸಾನ್ ಹೊಲ್​ ಸೆಲ್ ವೆಜಿಟೇಬಲ್ ಮಾರ್ಕೆಟ್ ಅಸೊಸಿಯೇಷನ್ ಅವರು ಖೊಟ್ಟಿ ದಾಖಲೆಗಳನ್ನು ಕೊಟ್ಟು ಸರ್ವೇ ನಂ. 677, 678, 979/1, 680/1, 686/1, 686/2, 696, 697/1, 698/1, 698/2 ಜಾಗದಲ್ಲಿ ಅನಧಿಕೃತವಾಗಿ ಖಾಸಗಿ ತರಕಾರಿ ಮಾರುಕಟ್ಟೆ ಕಟ್ಟಡ ನಿರ್ಮಿಸಿರುತ್ತಾರೆ. ಇದರಲ್ಲಿ ಸರ್ಕಾರದ ಅಧಿಕಾರಿಗಳ ಕೈವಾಡವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ಸರ್ಕಾರ ಹಾಗೂ ರೈತರಿಗೆ ಸೆಡ್ಡು ಹೊಡೆದು ಖಾಸಗಿ ಮಾರುಕಟ್ಟೆ ಪ್ರಾರಂಭಿಸಲು ತಮ್ಮ ಅಧಿಕಾರ ಮತ್ತು ಕರ್ತವ್ಯ ಲೋಪದಿಂದ ದಾಖಲೆಗಳನ್ನು ತಿರುಚಿ ಸರ್ಕಾರಕ್ಕೆ ಬರಬೇಕಾದ ತೆರಿಗೆ ನಷ್ಟ ಮಾಡಿದ್ದಾರೆ. ಇದರಲ್ಲಿ 24 ಪ್ರಮುಖ ನ್ಯೂನತೆಗಳಾಗಿದ್ದು, ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಖಾಸಗಿ ಮಾರುಕಟ್ಟೆಗೆ ನೀಡಿರುವ ಪರವಾನಗಿ ರದ್ದು ಪಡಿಸಬೇಕು. ಅಲ್ಲದೇ ಈ ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿ, ದಾಖಲೆಗಳನ್ನು ತಿರುಚಿ, ಸರ್ಕಾರದ ಬೊಕ್ಕಸಕ್ಕೆ ಹಾನಿ, ಕಾನೂನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗಳ್ಳುವಂತೆ ಸಂಘ ಒತ್ತಾಯಿಸಿ ಪಾಲಿಕೆ ಆಯುಕ್ತ ಅಶೋಕ‌ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ, ಮಾಧ್ಯಮಗಳ ಜೊತೆಗೆ ಮಾತನಾಡಿದ ವ್ಯಾಪಾರಿ ಸತೀಶ ಪಾಟೀಲ, 2017ರಿಂದ ಖಾಸಗಿ ಎಪಿಎಂಸಿ ವಿರುದ್ಧ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅಂದು ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಬಂದು ನಮ್ಮ ಸರ್ಕಾರ ಬಂದರೇ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಹೊಸ ಸರ್ಕಾರ ಬಂದಿರೋದರಿಂದ ನ್ಯಾಯ ಸಿಗುತ್ತೆ ಎನ್ನುವ ಆಶಾಭಾವನೆ ನಮಗೆ ಬಂದಿದೆ. ಹೀಗಾಗಿ ಅಕ್ರಮ ವ್ಯವಹಾರದ ಕುರಿತು ತನಿಖೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ, ಆ ಖಾಸಗಿ ಎಪಿಎಂಸಿ ಕಟ್ಟಡವನ್ನು ನೆಲಸಮ ಮಾಡಬೇಕು. ಸರ್ಕಾರಿ ಎಪಿಎಂಸಿ ಪುನಃ ಆರಂಭವಾಗಬೇಕು ಎಂದು ಆಗ್ರಹಿಸಿದರು.

ಮನವಿಯನ್ನು ಪಡೆದ ಬಳಿಕ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ಮಹಾನಗರ ಪಾಲಿಕೆಗೆ ಸಂಬಂಧಿಸಿದ ಅಂಶಗಳ ನ್ಯೂನತೆಯ ಕುರಿತು ಒಂದು ತಂಡ ರಚಿಸಿ, ಸ್ಥಳ ತನಿಖೆ ಮಾಡಿ ನಿಯಮಾನುಸಾರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಇನ್ನುಳಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಇರುವ ನ್ಯೂನತೆಗಳಿಗೆ ಸಂಬಂಧಿಸಿದಂತೆ ಅವರಿಗೂ ಸಹಾ ಸೂಕ್ತ ಕ್ರಮ ಕೈಗೊಳ್ಳು ಮನವಿ ಸಲ್ಲಿಸಿದ್ದಾರೆ ಎಂದರು. ಇನ್ನು ಪ್ರತಿಭಟನೆಯಲ್ಲಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಸದಾ ಪಾಟೀಲ, ಭಾವು ಶಾಹಪುರಕರ್, ವಿಕ್ರಮಸಿಂಗ್ ಕದಂ, ಗಿರೀಶಕುಮಾರ ಕೊಡೊಳ್ಳಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ : Karnataka Budget 2023: ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಗರ ಬೆಟ್ಟದಷ್ಟು ನಿರೀಕ್ಷೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.