ETV Bharat / state

ಜಿಎಸ್​ಟಿ ನಂಬರ್ ಮಂಜೂರಿಗೆ ಲಂಚ: ಎಸಿಬಿ ಬಲೆಗೆ ವಾಣಿಜ್ಯ ತೆರಿಗೆ ಅಧಿಕಾರಿ - Commercial tax officer arrest by ACB

ಜಿಎಸ್​​ಟಿ ನಂಬರ್ ಮಂಜೂರು ಮಾಡಲು ಹಣದ ಬೇಡಿಕೆ ಇಟ್ಟ, ವಾಣಿಜ್ಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್​​ ಮೆಹಬೂಬ್ ಬಾಬಾಲಾಲ್ ಸಿಪಾಯಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಬಲೆಗೆ ವಾಣಿಜ್ಯ ತೆರಿಗೆ ಅಧಿಕಾರಿ
ಎಸಿಬಿ ಬಲೆಗೆ ವಾಣಿಜ್ಯ ತೆರಿಗೆ ಅಧಿಕಾರಿ
author img

By

Published : Feb 19, 2021, 2:36 PM IST

ಬೆಳಗಾವಿ: ಮೊಬೈಲ್ ಅಂಗಡಿ ಮಾಲೀಕನಿಗೆ ಜಿಎಸ್​​ಟಿ ನಂಬರ್ ಮಂಜೂರು ಮಾಡಲು ಹಣದ ಬೇಡಿಕೆ ಇಟ್ಟಿದ್ದ ಇಲ್ಲಿನ ವಾಣಿಜ್ಯ ತೆರಿಗೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

ವಾಣಿಜ್ಯ ತೆರಿಗೆ ಇಲಾಖೆಯ ಇನ್​​ಸ್ಪೆಕ್ಟರ್​​ ಮೆಹಬೂಬ್ ಬಾಬಾಲಾಲ್ ಸಿಪಾಯಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಹೊಸ ಮೊಬೈಲ್ ಅಂಗಡಿಗೆ ಜಿಎಸ್​ಟಿ ನಂಬರ್ ನೀಡುವ ವಿಚಾರಕ್ಕೆ ಮೆಹಬೂಬ್ 2 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಾಕತಿ ಮೂಲದ ನದೀಮ ಮುಲ್ಲಾ ಎಂಬುವರು ಜೆಎಸ್​​ಟಿ ನಂಬರ್ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು.

ಓದಿ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಲಕ್ಷ ಮೌಲ್ಯದ ಅಫೀಮು​ ಜಪ್ತಿ

ಇಂದು ಮೊಬೈಲ್ ಅಂಗಡಿ ಮಾಲೀಕ ಹಣ ನೀಡುವಾಗ ವಾಣಿಜ್ಯ ತೆರಿಗೆ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಎಸ್ಪಿ ಬಿ.ಎಸ್. ನ್ಯಾಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್​​ಸ್ಪೆಕ್ಟರ್​ಗಳಾದ ಎ.ಎಸ್. ಗುದಿಗೊಪ್ಪ ಮತ್ತು ಸುನಿಲಕುಮಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.