ETV Bharat / state

ಅಥಣಿ: ಹಾವು ಕಚ್ಚಿ ತಂದೆ-ಮಗ ದಾರುಣ ಸಾವು

ಆಗಸ್ಟ್​​ 29ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋದಾಗ ತಂದೆ-ಮಗ ಇಬ್ಬರಿಗೂ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Snake Bite
Snake Bite
author img

By

Published : Sep 4, 2021, 2:12 AM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ತಂದೆ-ಮಗ ಇಬ್ಬರಿಗೂ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲಿಕಾರ್ಜುನ್​ (14) ಹಾಗೂ ಮುತ್ತಪ್ಪ (40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕಳೆದ ಆಗಸ್ಟ್​​ 29ರಂದು ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಗಸ್ಟ್​ 31​ ರಂದು ಮಲ್ಲಿಕಾರ್ಜುನ್​ ಸಾವನ್ನಪ್ಪಿದ್ದು, ಸೆ. 2ರಂದು ಚಿಕಿತ್ಸೆ ಫಲಕಾರಿಯಾಗದೇ ಮುತ್ತಪ್ಪ ಕೂಡ ಸಾವನ್ನಪ್ಪಿದ್ದಾನೆ. ಇಬ್ಬರನ್ನು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರನ್ನೂ ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿರಿ: ಕೋವಿಡ್​ ಮೂರನೇ ಅಲೆಯಲ್ಲ, 30ನೇ ಅಲೆ ಬಂದರೂ ನಾವು ಹೆದರುವುದಿಲ್ಲ: ಸಚಿವ ಈಶ್ವರಪ್ಪ

ಘಟನೆ ವಿವರ: ಕಳೆದ ಆಗಸ್ಟ್​​ 29ರಂದು ನಸುಕಿನ ಜಾವ ಹೊಲಕ್ಕೆ ನೀರು ಹಾಯಿಸಲು ಹೋದಾಗ ಇಬ್ಬರಿಗೂ ಹಾವು ಕಚ್ಚಿದೆ. ಕತ್ತಲು ಇದ್ದ ಕಾರಣ ಇರುವೆ ಅಥವಾ ಬೇರೆ ಹುಳು ಕಚ್ಚಿರಬಹುದು ಎಂದು ಭಾವಿಸಿ, ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ ಕೆಲ ಗಂಟೆಗಳ ನಂತರ ತೀವ್ರ ಅಸ್ವಸ್ಥರಾಗಿದ್ದಾರೆ. ಈ ವೇಳೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಐಗಳಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.