ಬೆಳಗಾವಿ: 2017ರಲ್ಲಿ 15.54 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡ ಗೋಕಾಕ ಫಾಲ್ಸ್ ಮತ್ತು ದುಪದಾಳ ನಡುವಿನ ಸೇತುವೆ ಕಾಮಗಾರಿ ಮುಗಿಸಲು ಜುಲೈ ಅಂತ್ಯದ ಗಡುವು ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲೆಯ ಗೋಕಾಕ ಪಟ್ಟಣದ ಹೊರವಲಯದಲ್ಲಿರುವ ಗೋಕಾಕ ಫಾಲ್ಸ್ಗೆ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜೊತೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, 2017ರಲ್ಲಿ 15.54 ಕೋಟಿ ರೂ.ಗಳ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈ ಸೇತುವೆ 350 ಮೀಟರ್ ಉದ್ದವಿದ್ದು 14 ಅಂಕಣಗಳನ್ನು ಹೊಂದಿದೆ. 12 ಮೀಟರ್ ಅಗಲವಿದ್ದು, ಪಾದಚಾರಿಗಳ ಮಾರ್ಗ ಕೂಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಓದಿ: ಕುಮಾರ್ ಬಂಗಾರಪ್ಪ ಹೈಡ್ರಾಮಾ ನಡುವೆ ರಾಜ್ಯ ಬಜೆಟ್ ಗುಟ್ಟು ರಟ್ಟು ಮಾಡಿದ ಸಿಎಂ
ದೇಶದಲ್ಲಿ ಕೊರೊನಾ ವೈರಸ್ ಬಂದ ಕಾರಣದಿಂದಾಗಿ ಸೇತುವೆ ಕಾಮಗಾರಿ ವಿಳಂಬವಾಗಿದೆ. ಮುಂಬರುವ ಜುಲೈನಲ್ಲಿ ಕಾಮಗಾರಿ ಮುಗಿಸುವಂತೆ ಈಗಾಗಲೇ ನಾನು ಮತ್ತು ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆದ್ರೆ, ಇನ್ನೂ ಸ್ವಲ್ಪ ಕಾಮಗಾರಿಗೆ ಸಮಯ ನೀಡುವಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂದರು.