ಚಿಕ್ಕೋಡಿ: ನನ್ನ ರಾಜಕೀಯ ಜೀವನದಲ್ಲಿಯೇ ನಾನು ಚುನಾವಣೆಯಲ್ಲಿ ಹಣ ಹಂಚಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಮಹೇಶ್ ಕುಮಟಳ್ಳಿ ಮನೆಯಲ್ಲಿ ಹಣ ಹಂಚಿದ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾನು ನನ್ನ ಡ್ರೈವರ್ಗೆ ಡೀಸೆಲ್ ಹಾಕಿಸಲು ಹಣ ಕೊಟ್ಟಿದ್ದು. ಅದನ್ನೇ ತಪ್ಪಾಗಿ ಗ್ರಹಿಸಿದ್ದಾರೆ ಎಂದರು.
ಇದುವರೆಗೂ ನಾನು ಚುನಾವಣೆಯಲ್ಲಿ ಯಾರಿಗಾದರೂ ಒಂದು ರೂಪಾಯಿ ಕೊಟ್ಟಿದ್ದು ಸಾಬೀತಾದರೆ ನಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಹೇಳಿದರು. ನಾನು 6 ಬಾರಿ ಎಲೆಕ್ಷನ್ ಮಾಡಿದ್ದೇನೆ. ಆದರೆ ಒಂದು ರೂಪಾಯಿ ಯಾರಿಗೂ ಕೊಟ್ಟಿಲ್ಲ, ಮುಂದೆ ಕೊಡುವುದೂ ಇಲ್ಲ ಎಂದರು.
ಅಥಣಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮನೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ಕಾರ್ಯಕರ್ತರಿಗೆ ಹಣ ಹಂಚಿದ್ದಾರೆ ಎನ್ನಲಾಗ್ತಿದ್ದು, ಈ ಕುರಿತ ವಿಡಿಯೋ ಒಂದು ವೈರಲ್ ಆಗಿತ್ತು.