ETV Bharat / state

ಲೋಕಸಭಾ ಉಪ ಚುನಾವಣೆ; ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಒಪ್ಪಿಸಲು ಡಿಸಿ ಹಿರೇಮಠ ಸೂಚನೆ - Belagavi Lokhashabha by election

ಚುನಾವಣೆಯ ಸಮಯದಲ್ಲಿ ಆಯುಧ ಲೈಸೆನ್ಸುದಾರರು ಆಯುಧಗಳೊಂದಿಗೆ ಓಡಾಡುವುದರಿಂದ ಶಾಂತಿಭಂಗ ಆಗಬಹುದು ಅಥವಾ ಲೈಸೆನ್ಸುದಾರರು ಆಯುಧಗಳು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಚುನಾವಣೆಯ ಸಮಯದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳುವುದು ಅವಶ್ಯ ವಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶವನ್ನು ಹೊರಡಿಸಿದ್ದಾರೆ.

ಲೋಕಸಭಾ ಉಪ ಚುನಾವಣೆ
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
author img

By

Published : Mar 19, 2021, 5:02 AM IST

ಬೆಳಗಾವಿ: ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ. ಲೈಸೆನ್ಸ್ ದಾರರು ಒಂದು ವೇಳೆ ಶಸ್ತ್ರಾಸ್ತ್ರ ಒಪ್ಪಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚುನಾವಣೆಯ ಸಮಯದಲ್ಲಿ ಆಯುಧ ಲೈಸೆನ್ಸುದಾರರು ಆಯುಧಗಳೊಂದಿಗೆ ಓಡಾಡುವುದರಿಂದ ಶಾಂತಿಭಂಗ ಆಗಬಹುದು ಅಥವಾ ಲೈಸೆನ್ಸುದಾರರು ಆಯುಧಗಳು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಚುನಾವಣೆಯ ಸಮಯದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳುವುದು ಅವಶ್ಯ ವಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶವನ್ನು ಹೊರಡಿಸಿದ್ದಾರೆ.

ಸೆಕ್ಯುರಿಟಿ ಏಜೆನ್ಸಿಗಳು, ಯಾವುದೇ ಸಂಸ್ಥೆಗಳಿಗೆ ಸೆಕ್ಯೂರಿಟಿ ಸೇವೆಗಳನ್ನು ನೀಡುವ ಗಾರ್ಡ್​ಗಳು, ಖಾಸಗಿ ಗನ್ ಮ್ಯಾನ್​ಗಳು, ಜಿಲ್ಲಾಮಟ್ಟದ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸುವ ಮುಖಾಂತರ ಶಸ್ತ್ರಾಸ್ತ್ರ ಜಮಾ ಮಾಡುವುದರಿಂದ ವಿನಾಯಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.