ಬೆಳಗಾವಿ: ಇಲ್ಲಿನ ನೆಹರು ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ಡಿ-ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ಇಚಲಕರಂಜಿಯ ಭರತ್ ಪಾಟೀಲ್ (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಬೆಳಗಾವಿ ಖಾಸಗಿ ಕಾಲೇಜಿನ ಡಿ-ಫಾರ್ಮಸಿ ಪ್ರಥಮ ವರ್ಷದಲ್ಲಿ ಭರತ್ ವ್ಯಾಸಂಗ ಮಾಡುತ್ತಿದ್ದ. ನೆಹರು ನಗರದಲ್ಲಿ ರೂಮ್ ಮಾಡಿಕೊಂಡು ತಂಗಿದ್ದ ಈತ, ಅಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಮರಾಠಿ ಭಾಷೆಯಲ್ಲಿ ಮೂರು ಲೈನ್ ಡೆತ್ ನೋಟ್ ಬರೆದಿಟ್ಟು ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
'ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್‌ನಿಂದ ಈ ನಿರ್ಣಯ ಕೈಗೊಂಡಿದ್ದೇನೆ. ನನ್ನಿಂದ ಯಾರ ಮನಸ್ಸಿಗಾದರೂ ನೋವಾದಲ್ಲಿ ಕ್ಷಮಿಸಿ, ಗುಡ್ ಬೈ' ಅಂತ ಡೆತ್‌ನೋಟ್ ಬರೆದು ಸ್ಮೈಲಿ ಸಿಂಬಾಲ್ ಚಿತ್ರ ಬಿಡಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಇದನ್ನೂ ಓದಿ: ಕೇವಲ 300 ರೂಪಾಯಿಗೆ ಸ್ನೇಹಿತನ ಪ್ರಾಣ ತೆಗೆದ!