ETV Bharat / state

ಚಿಕ್ಕೋಡಿ ಯೋಧನ ಬಂಧನ: ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸಿಆರ್​ಪಿಎಫ್​​ ಎಡಿಜಿಪಿ ಪತ್ರ

ಸಿಆರ್​ಪಿಎಫ್​​ ಯೋಧನ ಬಂಧನ ಪ್ರಕರಣದ ಕುರಿತು ರಾಜ್ಯ ಪೊಲೀಸರಿಗೆ ಪತ್ರ ಬರೆದಿರುವ ಸಿಆರ್​ಪಿಎಫ್​​ ಎಡಿಜಿಪಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಿಳಿಸಿದ್ದಾರೆ.

CRPF constable arrested
ಸಿಆರ್​ಪಿಎಫ್​​ ಯೋಧ
author img

By

Published : Apr 27, 2020, 8:28 PM IST

Updated : Apr 28, 2020, 9:49 AM IST

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಸಿಆರ್​ಪಿಎಫ್​​ ಯೋಧನ ಬಂಧನ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಿಆರ್​ಪಿಎಫ್ ಎಡಿಜಿಪಿ ಸಂಜಯ್ ಅರೋರಾ ಅವರು ರಾಜ್ಯದ ಡಿಜಿ-ಐಜಿಪಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ನಡೆಸಿದ ಯೋಧ ಅರೆಸ್ಟ್; ಎಸ್​ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಿಷ್ಟು!

ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಸದಲಗಾ ಪೊಲೀಸರು ಹಾಗೂ ಸಿಆರ್​ಪಿಎಫ್ ಯೋಧನ ಮಧ್ಯೆ ವಾಗ್ವಾದ ಆಗಿತ್ತು. ಇದು ವಿಕೋಪಕ್ಕೆ ತಿರುಗಿ, ಪೇದೆ ಮೇಲೆ ಯೋಧ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದ್ನೂ ಓದಿ: ಮಾಸ್ಕ್ ಧರಿಸದ ಯೋಧನ ಬಂಧನ; ಸಚಿವ ‌ಜಾರಕಿಹೊಳಿ ಖಂಡನೆ

ಘಟನೆ ಹತ್ತಿಕ್ಕಲು ಮತ್ತೋರ್ವ ಪೇದೆ ಯೋಧನ ಮೇಲೆ‌ ಲಾಠಿ ಚಾರ್ಜ್ ಮಾಡಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಯೋಧನನ್ನು‌‌ ಬಂಧಿಸುವ ಮುನ್ನ ಸಿಆರ್​ಪಿಎಫ್ ಮೇಲಧಿಕಾರಿಗಳ ಗಮನಕ್ಕೆ ಪೊಲೀಸರು ತರಬೇಕಿತ್ತು. ಆದರೆ, ಈ ಕೆಲಸ ಪೊಲೀಸರಿಂದ ಆಗಿಲ್ಲ ಎಂದು ಸಿಆರ್​ಪಿಎಫ್ ಎಡಿಜಿಪಿ ಸಂಜಯ್ ಅರೋರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

CRPF constable arrested
ಸಿಆರ್​ಪಿಎಫ್​​ ಎಡಿಜಿಪಿ ಪತ್ರ

ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಡಿಜಿ-ಐಜಿಪಿಗೆ ಪತ್ರದ ಮೂಲಕ ಕೋರಿದ್ದಾರೆ.

Last Updated : Apr 28, 2020, 9:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.