ETV Bharat / state

ಜನತಾ ದರ್ಶನಕ್ಕೆ ಜನಸಾಗರ: ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ.. ಸಮಸ್ಯೆ ಆಲಿಸಿದ ಅಧಿಕಾರಿಗಳು, ಶಾಸಕರು - ಬೈಲಹೊಂಗಲ ತಾಲೂಕಿನ ನಾವಲಗಟ್ಟಿ

ಬೆಳಗಾವಿಯಲ್ಲಿ ನೂರಾರು ಜನರು ಶಾಸಕರು ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜನತಾ ದರ್ಶನದಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ಜನತಾ ದರ್ಶನ
ಜನತಾ ದರ್ಶನ
author img

By ETV Bharat Karnataka Team

Published : Sep 26, 2023, 9:34 PM IST

ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಎಂ ಸನದಿ

ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ವೃದ್ಧರು, ಅಂಗವಿಕಲರು ಸೇರಿ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತೋಡಿಕೊಂಡರು. ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ವಿಠಲ ದೇಸಾಯಿ

ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಜಿಲ್ಲಾಡಳಿತದಿಂದ 8 ಕೇಂದ್ರಗಳನ್ನು ತೆರೆಯಲಾಗಿತ್ತು. ಅರ್ಜಿ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಿದ ಜನರು, ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​, ವಿಧಾನಪರಿಷತ್ ಹಿರಿಯ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ವಿಶ್ವಾಸ ವೈದ್ಯ ಅವರ ಬಳಿಯೂ ತಮ್ಮ ಸಮಸ್ಯೆ ಹೇಳಿಕೊಂಡರು. ಈ ವೇಳೆ ಆಯಾ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಅವರಿಗೆ ಇವರ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೀಗೆ ತಮ್ಮ ಬೇಡಿಕೆ ಈಡೇರಿಸುವಂತೆ ಅರ್ಜಿ ಸಲ್ಲಿಸಲು ಆಗಮಿಸಿದ್ದ ವಿಶೇಷಚೇತನರಾದ ದಯಾನಂದ ಮಾವಿನಕಟ್ಟಿ ಮತ್ತು ಮಹಾನಂದಾ ಅವರು ಈಟಿವಿ ಭಾರತ್ ಜೊತೆಗೆ ಮಾತನಾಡಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿ ಕಳೆದ 13-15 ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ. ಮೊದಲು 700 ರೂ. ತಿಂಗಳಿಗೆ ಗೌರವಧನ ನೀಡುತ್ತಿದ್ದರು. ಈಗ 9 ಸಾವಿರ ಬರುತ್ತಿದೆ. ಇಂದಿನ ಬೆಲೆ ಏರಿಕೆ ಕಾಲದಲ್ಲಿ ಇದು ಯಾವುದಕ್ಕೂ ಸಾಲುತ್ತಿಲ್ಲ. ಅಂಗವಿಕಲರಿಗೆ ಸೌಲಭ್ಯಗಳನ್ನು ಒದಗಿಸುವ ನಮಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಬೇಕು. ಹಾಗಾಗಿ, ನಮ್ಮ ವೇತನ ಹೆಚ್ಚಿಸಬೇಕು ಮತ್ತು ಖಾಯಂಗೊಳಿಸುವಂತೆ ಆಗ್ರಹಿಸಿದರು.

ವಸಂತ ಅಕ್ಕವ್ವ ಮಾದಿಗ

ಇನ್ನು ಬೆಳಗಾವಿ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಕೂಲಿಕಾರರು ನರೇಗಾ ಯೋಜನೆಯಡಿ ನಮಗೆ ಸರಿಯಾಗಿ ಕೂಲಿ ಕೊಡುತ್ತಿಲ್ಲ. ಕೇವಲ 20 ದಿನ ಕೂಲಿ ನೀಡಿದ್ದು, ಮಾಡಿದ ಕೆಲಸಕ್ಕೆ ವೇತನವನ್ನೂ ಕೊಡುತ್ತಿಲ್ಲ. ಹಾಗಾಗಿ, ನೂರು ದಿನ ಕೂಲಿ ಮತ್ತು ಕಾರ್ಮಿಕರ ಕಾರ್ಡ್ ನೀಡಬೇಕು. ಕಟ್ಟಡ ಕಾರ್ಮಿಕರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮಗೂ ಒದಗಿಸಬೇಕು. ನಮ್ಮ ಮಕ್ಕಳಿಗೆ ಶಿಷ್ಯವೇತನ, ಲ್ಯಾಪ್​ಟಾಪ್ ವಿತರಣೆ ಸೇರಿ ಇನ್ನಿತರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ವಿಠಲ ದೇಸಾಯಿ ಮತ್ತು ಮಂಜುಳಾ ಅವರು ಒತ್ತಾಯಿಸಿದರು.

ಶಿವಾಜಿ ಪಾತ್ರೋಟ

ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಎಂ ಸನದಿ ಮಾತನಾಡಿ, 2006ರ ಪೂರ್ವದಲ್ಲಿ ಅನುದಾನ ರಹಿತವಾಗಿ ನೇಮಕಾತಿಗೊಂಡು 2006ರ ನಂತರ ವೇತನಾನುದಾನಕ್ಕೆ ಒಳಪಟ್ಟು ನಿವೃತ್ತಿಯಾದ ಶಿಕ್ಷಕರು ತೀರಾ ಸಂಕಷ್ಟದಲ್ಲಿದ್ದೇವೆ. ನಮಗೆ ಇತ್ತ ಒಪಿಎಸ್ ಸೌಲಭ್ಯವೂ ಸಿಕ್ಕಿಲ್ಲ. ಅತ್ತ ಎನ್.ಪಿ.ಎಸ್ ಸೌಲಭ್ಯದಿಂದಲೂ ನಾವು ವಂಚಿತರಾಗಿದ್ದೇವೆ. ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ, ಪಿಂಚಣಿ ಕೊಟ್ಟು ನಮ್ಮನ್ನು ಕಾಪಾಡಿ ಎಂದು ಸರ್ಕಾರಕ್ಕೆ ಅಂಗಲಾಚಿದರು.

ವಿಶೇಷ ಚೇತನ ದಯಾನಂದ ಮಾವಿನಕಟ್ಟಿ

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದಿಂದ ಆಗಮಿಸಿದ್ದ ಜನರು ತಮಗೆ ತಿಗಡಿ ಹರಿನಾಲಾ ಹಿನ್ನೀರಿನಲ್ಲಿ ಮುಳುಗಡೆಯಾದ ನಾವಲಗಟ್ಟಿ ಗ್ರಾಮದ 198 ಮನೆಗಳಿಗೆ ಪರಿಹಾರ ನೀಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಸಂತ್ರಸ್ತ ಶಿವಾಜಿ ಪಾತ್ರೋಟ, ಅನೇಕ ವರ್ಷಗಳಿಂದ ನಾವು ಹೋರಾಟ ಮಾಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈಗಲಾದ್ರೂ ನೊಂದ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ಅಂಧ ಹಿರಿಯ ಜೀವಿಗೆ ಬೇಕಿದೆ ಆಶ್ರಯ: ಹುಕ್ಕೇರಿ ತಾಲ್ಲೂಕಿನ ಕರಜಗಾ ಗ್ರಾಮದ ಅಂಧ ವ್ಯಕ್ತಿ ವಸಂತ ಅಕ್ಕವ್ವ ಮಾದಿಗ ಎಂಬುವವರು ಈಟಿವಿ ಭಾರತ್ ಜೊತೆಗೆ ತಮ್ಮ ಅಳಲು ತೋಡಿಕೊಂಡರು. ಕಳೆದ ಮೂರು ವರ್ಷಗಳಿಂದ ಬಿದ್ದಿರುವ ಮನೆಯಲ್ಲೆ ವಾಸವಿದ್ದೇನೆ. ಪಿಡಿಒ ಮತ್ತು ತಲಾಟಿಗಳು ಬಂದು ನೋಡಿ ಹೋಗುತ್ತಾರೆ ಅಷ್ಟೇ. ಇದ್ದವರಿಗೆ ಮನೆ ಮಾಡುತ್ತಾರೆ. ಆದರೆ, ನಮ್ಮಂತವರನ್ನು ಯಾರೂ ತಿರುಗಿಯೂ ನೋಡುತ್ತಿಲ್ಲ ಎಂದು ದೂರಿದರು.

ಬಿದ್ದ ಮನೆಯ ಒಂದು ಕೊಠಡಿಯಲ್ಲಿ ಈಗ ಒಬ್ಬನೆ ವಾಸವಿದ್ದೇನೆ. ಮಳೆ ಬಂತು ಎಂದರೆ ಇನ್ನೊಬ್ಬರ ಮನೆ ಮುಂದೆ ಹೋಗಿ ಮಲಗುತ್ತೇನೆ. 800 ರೂ. ಸರ್ಕಾರದಿಂದ ಸಹಾಯಧನ ಬರುತ್ತದೆ. ಅಕ್ಕ ಪಕ್ಕದವರು ಕೊಡುವ ಊಟವೇ ನನಗೆ ಆಧಾರ. ಹಾಗಾಗಿ, ಸರ್ಕಾರ ನನಗೆ ಒಂದು ಮನೆ ಕಟ್ಟಿ ಕೊಟ್ಟು, ನನಗೆ ಏನಾದರೂ ಆರ್ಥಿಕ ಸಹಾಯ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ವಸಂತ ಮಾದಿಗ ಅವರು ಕೇಳಿಕೊಂಡರು.

ಬೆಳಗಾವಿಯ ಕೆಪಿಟಿಸಿಎಲ್ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟಾರೆ 713 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳನ್ನು ಐಪಿಜಿಆರ್ ಎಸ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ.

ಇದನ್ನೂ ಓದಿ: ಚಿಂಚೋಳಿ ಜನತಾ ದರ್ಶನ ಕಾರ್ಯಕ್ರಮ: 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ, 250 ಸ್ಥಳದಲ್ಲಿಯೇ ವಿಲೇವಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.