ETV Bharat / state

ಬೆಳಗಾವಿ: ಚಿನ್ನಾಭರಣ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ - ಚಿನ್ನಾಭರಣ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ

ಚಿನ್ನದ ಅಂಗಡಿ ಮಾಲೀಕರನ್ನು ಗುರಿಯಾಗಿಸಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

thief-arrested-by-belagavi-police
ಬೆಳಗಾವಿ : ಚಿನ್ನಾಭರಣ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ
author img

By

Published : Jun 28, 2023, 10:01 PM IST

ಬೆಳಗಾವಿ : ಚಿನ್ನಾಭರಣ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳನ ಬಂಧನ

ಚಿಕ್ಕೋಡಿ (ಬೆಳಗಾವಿ): ಚಿನ್ನದ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣವನ್ನು ಕದ್ದು ಪರಾರಿಯಾಗುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಧ್ಯಪ್ರದೇಶದ ಧಾರಾ ಜಿಲ್ಲೆಯ ವಿಕ್ರಮ ಚವ್ಹಾಣ್​ ಎಂದು ಗುರುತಿಸಲಾಗಿದೆ. 51 ಲಕ್ಷ ರೂಪಾಯಿ ಮೌಲ್ಯದ 925 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ಫೆಬ್ರವರಿ 4ರಂದು ಹುಬ್ಬಳ್ಳಿ ಮೂಲದ ಚಿನ್ನದ ವ್ಯಾಪಾರಿಯಾದ ಕರಣ್​ ಸಿಂಗ್ ರಜಪೂತ್​ ಎಂಬವರು ಚಿನ್ನಾಭರಣಗಳನ್ನು ಖರೀದಿಸಿ ಮುಂಬೈನಿಂದ ಹುಬ್ಬಳ್ಳಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಮೀಪದಲ್ಲಿ ಟಿ ಕುಡಿಯಲು ಬಸ್​ ನಿಲ್ಲಿಸಲಾಗಿದೆ. ಕರಣ್​ ಸಿಂಗ್​ ಅವರು ಚಹಾ ಕುಡಿಯಲು ಬಸ್ಸಿನಿಂದ ಇಳಿದಿದ್ದಾರೆ. ಕಳ್ಳರು ಬಸ್ಸಿನಲ್ಲಿರಿಸಿ ಹೋಗಿದ್ದ 925 ಗ್ರಾಂ ಚಿನ್ನಾಭರಣ ಇದ್ದ ಬ್ಯಾಗ್​ ಎಗರಿಸಿದ್ದಾರೆ.

ಚಿನ್ನಾಭರಣ ಹೊಂದಿದ್ದ ಬ್ಯಾಗ್ ಕಳುವಾಗಿರುವುದು ಕರಣ್ ಗಮನಕ್ಕೆ ಬಂದಿದೆ. ತಕ್ಷಣ ಅವರು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿದ ಹುಕ್ಕೇರಿ ಸಿಪಿಐ ರಫೀಕ್ ತಹಶೀಲ್ದಾರ್ ನೇತೃತ್ವದ ತಂಡ ಓರ್ವನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗೆ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎಸ್.ಪಿ. ಡಾಕ್ಟರ್ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಇಬ್ಬರು ಕಳ್ಳರ ಬಂಧನ : ಸುರತ್ಕಲ್​ ಮತ್ತು ಮೂಡುಬಿದಿರೆಯಲ್ಲಿ ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಮಂಗಳೂರಿನ ಸುರತ್ಕಲ್ ಕೃಷ್ಣಾಪುರ ನಿವಾಸಿ ಹಬೀಬ್ ಹಸನ್ ಯಾನೆ ಚೊಂಬುಗುಡ್ಡ ಹಬೀಬ್ ಯಾನೆ ಅಬ್ಬಿ ಮತ್ತು ಮಂಗಳೂರಿನ ಉಳ್ಳಾಲದ ಕೋಡಿ ನ್ಯೂ ತೋಟ ಹೌಸ್ ನಿವಾಸಿ ಮೊಹಮ್ಮದ್ ಫೈಜಲ್ ಯಾನೆ ಕೋಡಿ ಫೈಜಲ್ ಯಾನೆ ಶಾಕೀರ್ ಯಾನೆ ಫೈಜ್ ಎಂದು ಗುರುತಿಸಲಾಗಿತ್ತು. 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್‌, ಸುರತ್ಕಲ್ ಮತ್ತು ಮೂಡಬಿದಿರೆಯಲ್ಲಿ ನಡೆದ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ 8 ಸರಗಳ್ಳತನ ಪ್ರಕರಣ ಮತ್ತು 4 ಬೈಕ್ ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದರು.

ಜೂನ್ 2 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. 75 ವರ್ಷದ ಮಹಿಳೆಯೊಬ್ಬರು ಜೂನ್ 2ರ ಮುಂಜಾನೆ ಮನೆಯ ಕಂಪೌಂಡಿನ ಒಳಗಿರುವ ಬಾವಿಯಿಂದ ನೀರು ಸೇದುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ 28 ಗ್ರಾಂನ ಸರ ಎಳೆದೊಯ್ದಿದ್ದರು. ಈ ಚಿನ್ನದ ಸರ ಅಂದಾಜು ಮೌಲ್ಯ 1,25,000 ರೂ. ಎಂದು ಅಂದಾಜಿಸಲಾಗಿತ್ತು.

ಇದನ್ನೂ ಓದಿ : Honeytrap: ಮಂಗಳೂರಿನಲ್ಲಿ ಕೇರಳ ಉದ್ಯಮಿಯ ಹನಿಟ್ರ್ಯಾಪ್: ಯುವತಿ ಸಹಿತ 8 ಮಂದಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.