ETV Bharat / state

ಬೆಳಗಾವಿ: ಪ್ರಿಯತಮನ ಜತೆ ಸೇರಿ ಪತಿ ಕೊಂದ ಪತ್ನಿ ಸೇರಿ ನಾಲ್ವರ ಬಂಧನ - ಗೋವಾದ ಚೋರ್ಲಾ ಘಾಟ್‌

ಪತಿಯನ್ನು ಕೊಂದ ಮಹಿಳೆ ಆತ ಕಾಣೆಯಾಗಿರುವುದಾಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು.

The murdered person and the four accused
ಕೊಲೆಯಾದ ವ್ಯಕ್ತಿ ಹಾಗೂ ನಾಲ್ವರು ಆರೋಪಿಗಳು
author img

By

Published : Jun 23, 2023, 5:24 PM IST

ಬೆಳಗಾವಿ: ಪ್ರಿಯತಮನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದ ಮಹಿಳೆ ಹಾಗೂ ಇತರ ಮೂವರು ಆರೋಪಿಗಳನ್ನು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಪ್ರಿಯತಮನೊಂದಿಗೆ ಸೇರಿ ಪತಿಯನ್ನು ಕೊಲೆಗೈದು ಮೂರು ತಿಂಗಳ ಹಿಂದೆ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಆಕೆಯೇ ಆರೋಪಿ ಎನ್ನುವುದನ್ನು ಬಯಲಿಗೆಳೆದಿದ್ದಾರೆ.

ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ಸಂಧ್ಯಾ, ಬಾಳು ಬಿರಂಜೆ, ಜಯ ಸಾಸನೆ, ನಿತಿನ್ ಅವಳೆ ಬಂಧಿತರು. ರಮೇಶ್ ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ಕಳೆದ ಮಾರ್ಚ್ 28 ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು. ವಾರಗಳು ಕಳೆದರೂ ಪತ್ತೆಯಾಗಿರಲಿಲ್ಲ. ಏಪ್ರಿಲ್ 5ರಂದು ತನ್ನ ಪತಿ ನಾಪತ್ತೆ ಆಗಿದ್ದಾರೆಂದು ಸಂಧ್ಯಾ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ನಂತರ ಪತಿ ಬೇರೆ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

ರಮೇಶ್​ ಫೋನ್ ಮನೆಯಲ್ಲೇ ಇದ್ದರೂ ಆತನ ಯಾವೊಬ್ಬ ಗೆಳೆಯರು ಕರೆ ಮಾಡದಿದ್ದಾಗ ಪೋಷಕರಿಗೆ ಸಂಶಯ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಪಿಎಂಸಿ ಠಾಣೆ ಪೊಲೀಸರು ಸಂಧ್ಯಾ ಹಾಗೂ ರಮೇಶ್‌ನ ಸ್ನೇಹಿತರನ್ನು ಕರೆಸಿ ವಿಚಾರಣೆ ಮಾಡಿದಾಗ ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದರು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತಾವೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸಂಧ್ಯಾ ಹಾಗೂ ಬಾಳು ಬಿರಂಜೆ ಮಧ್ಯ ಅನೈತಿಕ ಸಂಬಂಧವಿತ್ತು. ಅನೈತಿಕ ಸಂಬಂಧಕ್ಕೆ ರಮೇಶ ಅಡ್ಡಿಯಾಗುತ್ತಾನೆ ಎಂದು ಸಂಧ್ಯಾ ಹಾಗೂ ಬಾಳು ಬಿರಂಜೆ ಚಿಂತೆ ಕಾಡಿದೆ. ಅನೈತಿಕ ಸಂಬಂಧದ ಬಗ್ಗೆ ರಮೇಶನಿಗೆ ತಿಳಿಯುತ್ತಿದ್ದಂತೆ ಇದಕ್ಕೆ ಕೊನೆ ಹಾಡಲೇಬೇಕು ಎಂದು ಸಂಧ್ಯಾ ಹಾಗೂ ಬಾಳು ಬಿರಂಜೆ ಆತನ ನಾಲ್ವರು ಸ್ನೇಹಿತರು ಕೂಡಿಕೊಂಡು ರಮೇಶ್‌ನನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿ ಗೋವಾದ ಚೋರ್ಲಾ ಘಾಟ್‌ನಲ್ಲಿ ಮೃತದೇಹವನ್ನು ಎಸೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿರುವುದಾಗಿ ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ. ರಮೇಶ್ ಮೃತದೇಹ ಪತ್ತೆಗೆ ಮುಂದಾಗಿರುವ ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ: ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.