ETV Bharat / state

ಬೆಳಗಾವಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

author img

By

Published : Jul 20, 2022, 3:26 PM IST

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿ ಸೂರಜ್ (32) ಮೃತ ಭಾರತೀಯ ಸೇನೆಯ ಯೋಧ.

cremation
ಸೂರಜ್

ಬೆಳಗಾವಿ: ಪಶ್ಚಿಮ ಬಂಗಾಳದ ಪಂಜಿಪಾಡಾದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿ ಗ್ರಾಮದ ಯೋಧ ಸೂರ‌ಜ್‌ ಧೋಂಡಿರಾಮ ಸುತಾರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಅಪಘಾತದಲ್ಲಿ ಸಾವನ್ನಪ್ಪಿದ ಯೋಧನ ಪಾರ್ಥಿವ ಶರೀರವನ್ನು ದೆಹಲಿ‌ಯಿಂದ ವಿಮಾನ ಮೂಲಕ ಬೆಳಗಾವಿ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಶ, ಎಸ್ಪಿ ಸಂಜೀವ್ ಪಾಟೀಲ ಸೇರಿದಂತೆ ಬಿಎಸ್ಎಫ್ ಅಧಿಕಾರಿಗಳು, ಯೋಧರು ಅಂತಿಮ ನಮನ ಸಲ್ಲಿಸಿದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದ ಯೋಧನ ಅಂತ್ಯಕ್ರಿಯೆ

ಸ್ವಗ್ರಾಮ ಯಡೂರವಾಡಿಗೆ ಆಗಮಿಸಿದ ಮೃತ ಯೋಧನ ಪಾರ್ಥಿವ ಶರೀರ ಕಂಡು ಯೋಧನ ಕುಟುಂಬಸ್ಥರು ಕಣ್ಣೀರು ಹಾಕಿದರು. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಕ್ಕೂ ಮೊದಲು ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಮೃತ ಯೋಧ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು.

ಕಳೆದ 2012ರಲ್ಲಿ ಸೂರಜ್ ಬಿಎಸ್‌ಎಫ್‌ಗೆ ಸೇರಿದ್ದರು. ಯೋಧ ಪತ್ನಿ ಸಮೇತರಾಗಿ ಆಟೊದಲ್ಲಿ ಸೋಮವಾರ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು. ಆಟೊದಿಂದ ಕೆಳಗಿಳಿಯುವ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅದರ ಚಕ್ರಕ್ಕೆ ಸಿಲುಕಿ ಯೋಧ ಮೃತಪಟ್ಟಿದ್ದರು.

ಇದನ್ನೂ ಓದಿ : ಅಪಘಾತದಲ್ಲಿ ಬಿಎಸ್ಎಫ್ ಯೋಧ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.