ETV Bharat / state

ಬೆಳಗಾವಿಯಲ್ಲಿ ಈವರೆಗೆ ಯಾವುದೇ ಮಕ್ಕಳಿಗೆ ಕೋವಿಡ್ ದೃಢಪಟ್ಟಿಲ್ಲ : ಡಿಸಿ ಎಂ ಜಿ ಹಿರೇಮಠ

ಶಾಲಾ-ಕಾಲೇಜುಗಳು ಆರಂಭಿಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಆದ್ಯತೆ ಮೇರೆಗೆ 1 ಲಕ್ಷದ 36 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಲಸಿಕೆ ಕೊಡಲಿಲ್ಲ. ಹೀಗಾಗಿ, ಲಸಿಕೆ ಕೊರತೆ ಆಗಿದೆ. ಬೀಮ್ಸ್ ಆಸ್ಪತ್ರೆಗೆ ಹೆಚ್ಚಿನ ಕೊರೊನಾ ಲಸಿಕೆ ಒದಗಿಸುವ ಕುರಿತು ಕ್ರಮಕೈಗೊಳ್ಳಲಾಗುವುದು..

ಡಿಸಿ ಎಂ.ಜಿ.ಹಿರೇಮಠ
ಡಿಸಿ ಎಂ.ಜಿ.ಹಿರೇಮಠ
author img

By

Published : Aug 14, 2021, 9:38 PM IST

ಬೆಳಗಾವಿ : ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಸದ್ಯ ಕೊರೊನಾ ಸೋಂಕಿತರ ಪಾಸಿಟಿವಿಟಿ ರೇಟ್ 0.7 ಇದ್ದು, ಈವರೆಗೂ ಜಿಲ್ಲೆಯ ಯಾವ ಮಕ್ಕಳಿಗೂ ಕೋವಿಡ್ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಹೇಳಿದರು.

ಈವರೆಗೆ ಯಾವುದೇ ಮಕ್ಕಳಿಗೆ ಕೋವಿಡ್ ದೃಢಪಟ್ಟಿಲ್ಲ : ಡಿಸಿ ಎಂ ಜಿ ಹಿರೇಮಠ್

426 ಆ್ಯಕ್ಟೀವ್ ಕೇಸ್​ಗಳು

ನಗರದಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ 426 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಅದರಲ್ಲಿ 299 ಹೋಮ್ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 116 ಜನರು ಸೋಂಕಿತರು ಹಾಸ್ಪಿಟಲ್​ನಲ್ಲಿದ್ದು, ಉಳಿದವರು ಕೋವಿಡ್ ಕೇರ್ ಸೆಂಟರ್​​ನಲ್ಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಲ್ಯಾಕ್​ ಫಂಗಸ್​ಗೆ 50 ಬಲಿ

ಬೆಳಗಾವಿ ಜಿಲ್ಲೆಯಲ್ಲಿ 474 ಬ್ಲ್ಯಾಕ್‌ ಫಂಗಸ್ ಪ್ರಕರಣ ಪತ್ತೆಯಾಗಿವೆ. ಅದರಲ್ಲಿ 270‌ ಜನರಿಗೆ ಜಿಲ್ಲಾಸ್ಪತ್ರೆ ಮತ್ತು 204 ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 398 ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಬೀಮ್ಸ್ ನಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. 374 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 50 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದರು.

ಶಾಲಾ-ಕಾಲೇಜುಗಳು ಆರಂಭಿಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಆದ್ಯತೆ ಮೇರೆಗೆ 1 ಲಕ್ಷದ 36 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಲಸಿಕೆ ಕೊಡಲಿಲ್ಲ. ಹೀಗಾಗಿ, ಲಸಿಕೆ ಕೊರತೆ ಆಗಿದೆ. ಬೀಮ್ಸ್ ಆಸ್ಪತ್ರೆಗೆ ಹೆಚ್ಚಿನ ಕೊರೊನಾ ಲಸಿಕೆ ಒದಗಿಸುವ ಕುರಿತು ಕ್ರಮಕೈಗೊಳ್ಳಲಾಗುವುದು.

ಇದಲ್ಲದೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ 96 ಗ್ರಾಮಗಳಲ್ಲಿನ 3,24,619 ಜನರ ಪೈಕಿ ಈಗಾಗಲೇ 1,66,140 ಜನರಿಗೆ ಲಸಿಕೆ ಹಾಕಲಾಗಿದೆ. ಈವರೆಗೂ 15,73,245 ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 4,30,867 ಜನರು ಸೆಕೆಂಡ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 7ಲಕ್ಷ 46 ಸಾವಿರ ಜನರಿಗೆ ಲಸಿಕೆ ಒದಗಿಸಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.