ETV Bharat / state

ಇಂಗ್ಲೆಂಡ್‍ನಲ್ಲಿರುವ ಬೆಳಗಾವಿ ಮೂಲದ ನರ್ಸ್ ದಂಪತಿ ಕೊರೊನಾದಿಂದ ಮುಕ್ತರಾಗಲು ನೆರವಾದ ಯೋಗ!! - ಗ್ಲಾನ್ ಕ್ಲುಯ್ಡ್ ಸರ್ಕಾರಿ ಆಸ್ಪತ್ರೆ

ಕಳೆದೊಂದು ದಶಕಗಳಿಂದ ನಿತ್ಯ ಯೋಗ ಮಾಡುತ್ತಿರುವ ರಾಜೀವ್ ಪತ್ನಿ ರೀನಾ ಒಂದೇ ವಾರಕ್ಕೆ ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಇವರ ಪತಿ ರಾಜೀವ್ ದೀರ್ಘ ಚಿಕಿತ್ಸೆಯ ಬಳಿಕ ಕೊರೊನಾದಿಂದ ಮುಕ್ತರಾಗಿದ್ದಾರೆ. ಇದೀಗ ನಿತ್ಯ ಮನೆಯಲ್ಲಿ ತಪ್ಪದೇ ಯೋಗ ಮಾಡುತ್ತಿದ್ದಾರೆ.

ನರ್ಸ್ ದಂಪತಿ
ನರ್ಸ್ ದಂಪತಿ
author img

By

Published : Jun 3, 2020, 9:51 PM IST

ಬೆಳಗಾವಿ : ಇಂಗ್ಲೆಂಡ್​ನಲ್ಲಿ ನೆಲೆಸಿರುವ ಬೆಳಗಾವಿ ಮೂಲದ ನರ್ಸ್ ದಂಪತಿ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಹಾಗೂ ಯೋಗದ ಸಹಾಯದಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಲ್ಲಿನ ಸದಾಶಿವ ನಗರದ ರಾಜೀವ್ ಮೇತ್ರಿ ಮತ್ತು ಇವರ ಪತ್ನಿ ರೀನಾ ಸೋಂಕಿನಿಂದ ಗುಣಮುಖರಾಗಿ ಮರುಜನ್ಮ ಪಡೆದಿದ್ದಾರೆ. ಇವರು ಕಳೆದ ಎರಡು ದಶಕಗಳಿಂದ ಇಂಗ್ಲೆಂಡ್‍ನ ಗ್ಲಾನ್ ಕ್ಲುಯ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಫ್ರಂಟ್‌ಲೈನ್ ವಾರಿಯರ್ಸ್ ಆಗಿರುವ ಈ ದಂಪತಿ, ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಈ ವೇಳೆ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಧೃತಿಗೆಡದೇ ಯೋಗ ಹಾಗೂ ಸಕಾಲಿಕ ವೈದ್ಯಕೀಯ ಚಿಕಿತ್ಸೆಯಿಂದ ಸದ್ಯ ಗುಣಮುಖರಾಗಿದ್ದಾರೆ.

Belgaum-based nurse
ರಾಜೀವ್ ಮೇತ್ರಿಯೊಂದಿಗೆ ವಿಡಿಯೋ ಸಂವಾದ ನಡೆಸಿದ ಸಿಎಂ ಯಡಿಯೂರಪ್ಪ

ಕಳೆದೊಂದು ದಶಕಗಳಿಂದ ನಿತ್ಯ ಯೋಗ ಮಾಡುತ್ತಿರುವ ರಾಜೀವ್ ಪತ್ನಿ ರೀನಾ ಒಂದೇ ವಾರಕ್ಕೆ ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಇವರ ಪತಿ ರಾಜೀವ್ ದೀರ್ಘ ಚಿಕಿತ್ಸೆಯ ಬಳಿಕ ಕೊರೊನಾದಿಂದ ಮುಕ್ತರಾಗಿದ್ದಾರೆ. ಇದೀಗ ನಿತ್ಯ ಮನೆಯಲ್ಲಿ ತಪ್ಪದೇ ಯೋಗ ಮಾಡುತ್ತಿದ್ದಾರೆ.

ವಿಶ್ವ ನರ್ಸ್ ದಿನದಂದು ಇಂಗ್ಲೆಂಡ್‍ನಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಿಎಂ ಯಡಿಯೂರಪ್ಪನವರು ರಾಜೀವ್ ಜೊತೆಗೆ ಮಾತನಾಡಿ ಧೈರ್ಯ ತುಂಬಿದ್ದರು. ಅಲ್ಲದೇ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಕೂಡ ಫೋನ್ ಮೂಲಕ ಮಾತನಾಡಿ ರಾಜೀವ್ ಕುಟುಂಬಕ್ಕೆ ಧೈರ್ಯ ಹೇಳಿದ್ದರು.

ಯೋಗಾ ಮಾಡುತ್ತಿರುವ ರಾಜೀವ್ ಮೇತ್ರಿ

ಇಂಗ್ಲೆಂಡಿನಲ್ಲಿ ಕನ್ನಡದ ಕಂಪು : ಸ್ಟಾಫ್ ನರ್ಸ್ ಆಗಿರುವ ರಾಜೀವ್ ಅವರು ಇಂಗ್ಲೆಂಡ್‍ನಲ್ಲಿಯೂ ಮಾತೃಭಾಷೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೆಂಡ್‍ನ ಕನ್ನಡ ಬಳಗದ ಖಜಾಂಚಿಯಾಗಿಯೂ ರಾಜೀವ್ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಅಲ್ಲಿರುವ ಅನಿವಾಸಿ ಕನ್ನಡಿಗರು ಸೇರಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

ಬಿಎಸ್​​ಸಿ ನರ್ಸಿಂಗ್ ಪದವೀಧರರಾದ ರಾಜೀವ್ ಅವರು, ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ನರ್ಸ್ ಆಗಿ 3ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ಇಂಗ್ಲೆಂಡ್​ಗೆ ತೆರಳಿದ ಇವರು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. 2004ರಲ್ಲಿ ಬೆಳಗಾವಿಯ ರೀನಾ ಜೊತೆ ವಿವಾಹವಾಗಿ ಇಂಗ್ಲೆಂಡಿಗೆ ಕರೆದೊಯ್ದರು. ರೀನಾ ಕೂಡ ಅದೇ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.