ಬೆಳಗಾವಿ: ಹುಬ್ಬಳ್ಳಿಯಿಂದ ಜಿಲ್ಲೆಗೆ ಮರಳಿದ್ದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಜನರೀಗ ಆತಂಕದಲ್ಲಿದ್ದಾರೆ.
ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ಪುತ್ರಿಗೆ ಕೊರೊನಾ ಸೋಂಕು ತಗುಲಿದೆ. ಇವರು ಹೆರಿಗೆಗೆಂದು ಬೈಲಹೊಂಗಲ ಪಟ್ಟಣದಲ್ಲಿರುವ ತವರು ಮನೆಗೆ ಬಂದಿದ್ದರು. ಇದೀಗ ಸೋಂಕು ದೃಢವಾಗಿದ್ದರಿಂದ ಪಟ್ಟಣದ ಬಸವೇಶ್ವರ ನಗರವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಗರ್ಭಿಣಿಯನ್ನು ಮನೆಗೆ ಕರೆದು ಊಟ ಮಾಡಿಸಿದ್ದ ಅಕ್ಕಪಕ್ಕದ ಮನೆಯವರಿಗೂ, ಸ್ನೇಹಿತೆಯರಿಗೂ ಹಾಗೂ ಮನೆ ಕೆಲಸದಾಕೆ ಮತ್ತು ಕುಟುಂಬಸ್ಥರು ಇದೀಗ ಆಘಾತಕ್ಕೆ ಒಳಗಾಗಿದ್ದಾರೆ. ಸೋಂಕಿತ ಗರ್ಭಿಣಿಯ ಸಂಪರ್ಕಕ್ಕೆ ಬಂದಿದ್ದ 15 ದಿನದ ಹಸುಗೂಸು ಸೇರಿದಂತೆ 20 ಕ್ಕೂ ಅಧಿಕ ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಅಲ್ಲದೇ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.