ETV Bharat / state

ಗುಣಮುಖನಾದವನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ​​: ಬೆಳಗಾವಿಯಲ್ಲಿ ಹೆಚ್ಚಿದ ಆತಂಕ - ಗುಣಮುಖನಾದವನಿಗೆ ಮತ್ತೆ ಪಾಸಿಟಿವ್

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನಿವಾಸಿಯಾಗಿರುವ ರೋಗಿ ನಂ. 298 ಗುಣಮುಖನಾಗಿ ಮೇ 5ರಂದು ಡಿಸ್ಚಾರ್ಜ್ ಆಗಿದ್ದ. ಈ ವ್ಯಕ್ತಿಯಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ.

Corona Positive Again for Healed Person
ಗುಣಮುಖನಾದವನಿಗೆ ಮತ್ತೆ ಪಾಸಿಟಿವ್: ಬೆಳಗಾವಿಯಲ್ಲಿ ಹೆಚ್ಚಿದ ಆತಂಕ
author img

By

Published : May 11, 2020, 8:14 PM IST

ಬೆಳಗಾವಿ: ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್​ ಆಗಿದ್ದ 50 ವರ್ಷದ ವ್ಯಕ್ತಿಗೆ ಮತ್ತೆ ಕೊರೊನಾ ಪಾಸಿಟಿವ್ ಬಂದಿದ್ದು, ಬೆಳಗಾವಿ ಜನರ ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನಿವಾಸಿಯಾಗಿರುವ ರೋಗಿ ನಂ. 298 ಗುಣಮುಖನಾಗಿ ಮೇ 5ರಂದು ಡಿಸ್ಚಾರ್ಜ್ ಆಗಿದ್ದ. ಈ ವ್ಯಕ್ತಿಯಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಬಂದಿದೆ. ಮೂಲತಃ ಗೋವಾದವನಾಗಿದ್ದ 50 ವರ್ಷದ ಈ ವ್ಯಕ್ತಿ ಹಲವು ವರ್ಷಗಳಿಂದ ಕುಡಚಿಯಲ್ಲಿ ನೆಲೆಸಿದ್ದ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಈ ವ್ಯಕ್ತಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ಈ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದನ್ನು ಉಲ್ಲೇಖಿಸಲಾಗಿದೆ. 45 ವರ್ಷದ ಪುರುಷ P-245ನಿಂದ P-298ಗೆ ಸೋಂಕು ತಗುಲಿತ್ತು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.