ETV Bharat / state

ಸರಕು ಸಾಗಾಣೆ ರೀತಿ ತಳ್ಳುಗಾಡಿಯಲ್ಲಿ ಶವ ಸಾಗಾಟ: ಅಥಣಿಯಲ್ಲಿ ಮನಕಲುಕುವ ದೃಶ್ಯ - corona effect on Funeral

ಕೊರೊನಾ ಭೀತಿಯಿಂದ ಶವ ಸಂಸ್ಕಾರಕ್ಕೆ ಜನರು ಬಾರದೇ ಇರುವುದರಿಂದ ಅಥಣಿಯಲ್ಲಿ ತಳ್ಳುವ ಗಾಡಿಯಲ್ಲಿ ಶವ ಸಾಗಾಟ ಮಾಡಲಾಗಿದೆ.

corona effect on Funeral
ತಳ್ಳು ಗಾಡಿಯಲ್ಲಿ ಶವ ಸಾಗಾಟ
author img

By

Published : Jul 17, 2020, 7:37 PM IST

ಅಥಣಿ(ಬೆಳಗಾವಿ): ಕೊರೊನಾ ವೈರಸ್ ಹರಡುವ ಭಯದಿಂದ ಶವ ಸಂಸ್ಕಾರಕ್ಕೆ ಸಂಬಂಧಿಕರು ಹಾಗೂ ಆಪ್ತರು ಬಾರದೇ ಇರುವುದರಿಂದ ತಳ್ಳುವ ಗಾಡಿಯಲ್ಲಿ ಶವವನ್ನು ಸಾಗಿಸಿರುವ ಹೃದಯವಿದ್ರಾವಕ ಘಟನೆ ಅಥಣಿಯಲ್ಲಿ ಸಂಭವಿಸಿದೆ.

ಅಥಣಿ ನಿವಾಸಿ ಸದಾಶಿವ ಎಂಬುವವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಇಂದು ಅವರು ಮೃತ ಪಟ್ಟಿದ್ದಾರೆ.

ಶವ ಸಂಸ್ಕಾರಕ್ಕೆ ಕುಟುಂಬ ಸದಸ್ಯರು, ಬಂಧು ಬಳಗ ಹಾಗೂ ಅಕ್ಕಪಕ್ಕದವರು ಯಾರೂ ಬಾರದೇ ಇರುವುದರಿಂದ ಮೃತನ ಪತ್ನಿ ಹಾಗೂ ಮಗ ಜೊತೆಗೂಡಿ ತಳ್ಳೋ ಗಾಡಿಯಲ್ಲಿ ಮೃತನ ಶವವನ್ನು ಸಾಗಾಟ ಮಾಡಿ ಶವ ಸಂಸ್ಕಾರ ಮಾಡಿದ್ದಾರೆ.

ತಳ್ಳು ಗಾಡಿಯಲ್ಲಿ ಶವ ಸಾಗಾಟ

ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.