ETV Bharat / state

ಬೆಳಗಾವಿಯಲ್ಲಿ ಪ್ರತಿ 100 ರಲ್ಲಿ 33 ಜನರಿಗೆ ಸೋಂಕು: ಗುಣಮುಖ ಪ್ರಮಾಣ ದುಪ್ಪಟ್ಟು - ಬೆಳಗಾವಿಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಕೋವಿಡ್ ಮರಣ ಪ್ರಮಾಣ ಮತ್ತು ಪಾಸಿಟಿವಿಟಿ ಪ್ರಮಾಣದ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದು, ಸದ್ಯಕ್ಕೆ ಜಿಲ್ಲೆಯಾದ್ಯಂತ ಒಟ್ಟಾರೆ 17,449 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 14,686 ಜನರು ಹೋಮ್ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

Belagavi Covid-19 latest news
ಬೆಳಗಾವಿಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ 33.56 %, ಮರಣ ಪ್ರಮಾಣ 0.42 %
author img

By

Published : May 25, 2021, 7:17 AM IST

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳ ಕೋವಿಡ್ ಮರಣ ಪ್ರಮಾಣ ಶೇ.0.42 ರಷ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.33.56 ರಷ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಸಿ, ಸದ್ಯಕ್ಕೆ ಜಿಲ್ಲೆಯಾದ್ಯಂತ ಒಟ್ಟಾರೆ 17,449 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 14,686 ಜನರು ಹೋಮ್ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಅವಶ್ಯಕತೆಗೆ ಅನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಒಟ್ಟು 15 KL ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 22 KL ಆಕ್ಸಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 KL ತಯಾರಿಕೆಯಾಗಿ ಕ್ರಮಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದರು.

Belagavi Covid-19 latest news
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಕೋವಿಡ್ ವಾರ್ ರೂಂ ಮತ್ತು ಕೇರ್ ಸೆಂಟರ್ ಸ್ಥಾಪನೆ:

ಜಿಲ್ಲಾ ಕೇಂದ್ರದಲ್ಲಿ 1 ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ ಸ್ಥಾಪಿಸಲಾಗಿದೆ. ಅಲ್ಲಿ ಹೋಮ್​ ಐಸೋಲೇಷನ್​ನಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ವಿಚಾರಿಸಲಾಗುತ್ತಿದೆ. ಸೋಂಕಿತರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಇರುವುದರ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಲಭ್ಯವಿರುವ ಬೆಡ್ಗಳ ವಿವರಗಳನ್ನು ಪಡೆಯಲಾಗುತ್ತಿದೆ ಎಂದಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಸಿಕೆ ಪೂರೈಕೆ:

ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ 38,81,117 ಗುರಿ ನೀಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 7,42,479 ಜನರಿಗೆ ಲಸಿಕೆ ನೀಡಲಾಗಿದೆ. 5,58,035 ಜನ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಎರಡನೆ ಡೋಸ್ ಪಡೆದವರ ಸಂಖ್ಯೆ 1,84,444 ಆಗಿದೆ. 31,41,015 ಮೊದಲ ಡೋಸ್ ಪಡೆಯಬೇಕಾದವರ ಸಂಖ್ಯೆ ಆಗಿದೆ. 1,33,404 ಜನ ಎರಡನೆ ಡೋಸ್ ಪಡೆಯಬೇಕಾಗಿದೆ‌ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ 670 ವಯಲ್ ಹಾಗೂ ರಾಜ್ಯದಿಂದ 3,740 ವಯಲ್ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 4,410 ವಯಲ್ ಲಸಿಕೆ ಪೂರೈಕೆ ಆಗಿದೆ. ಅದೇ ರೀತಿ, ಕೇಂದ್ರದಿಂದ 8,310 ವಯಲ್ ಹಾಗೂ ರಾಜ್ಯದಿಂದ 15,490ವಯಲ್ ಗಳಷ್ಟು ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 23,800 ವಯಲ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮ್​ಡಿಸಿವರ್‌ ಪೂರೈಕೆ:

ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ.1ರಿಂದ ಮೇ.23 ರ ವರೆಗೆ 23,283 ರೆಮ್‌ಡಿಸಿವಿರ್‌ ಪೂರೈಕೆಯಾಗಿರುತ್ತವೆ. ಇವುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು 19,531 ವಯಲ್‌ಗಳನ್ನು ನೀಡಲಾಗಿದೆ. ಸದ್ಯ 3,752 ವಯಲ್‌ಗಳು ಜಿಲ್ಲಾ ಉಗ್ರಾಣದಲ್ಲಿ ಲಭ್ಯವಿರುತ್ತವೆ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಏ.1 ರಿಂದ ಮೇ.23 ರ ವರೆಗೆ 16,881 ರೆಮ್​ಡಿಸಿವಿರ್‌ ವಯಲ್‌ಗಳು ಪೂರೈಕೆಯಾಗಿರುತ್ತವೆ. ರೆಮ್​ಡಿಸಿವಿರ್ ಹಂಚಿಕೆ ಅನುಸಾರ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ರೆಮ್​ಡಿಸಿವಿರ್ ಅಗತ್ಯವಿರುವುದಿಲ್ಲ, ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೋವಿಡ್ -19 ಕುರಿತು ಅಂಕಿ ಅಂಶಗಳ ಮಾಹಿತಿ :

ಮಾ.17 ರಿಂದ ಮೇ.24 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 2,05,154 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ 30,022 ಜನರಲ್ಲಿ ಸೋಂಕು ದೃಢಪಟ್ಟಿದೆ. 12,346 ಜನ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, 17,449 ಸಕ್ರಿಯವಾಗಿರುವ ಪ್ರಕರಣಗಳಿವೆ. ಹೋಮ್​ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14,686 ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 319 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಕಡಿಮೆ ಕೋವಿಡ್ ಮರಣ ಪ್ರಮಾಣ:

ಕೋವಿಡ್ ಕಾರಣದಿಂದಾಗಿ 87 ಜನ ಮರಣ ಹೊಂದಿದ್ದಾರೆ. ಅಲ್ಲದೇ, ಸಕಾರಾತ್ಮಕ ಪ್ರಕರಣ (ಪಾಸಿಟಿವಿಟಿ ರೇಟ್​) ಕಳೆದ 10 ದಿವಸದಿಂದ 33.56% ಆಗಿದೆ. ಗುಣಮುಖರಾದವರ ಪ್ರಮಾಣ ಶೇಕಡಾವಾರು 68.67% ಆಗಿದ್ದು, ಮರಣ ಪ್ರಮಾಣ (ಕಳೆದ 10 ದಿವಸದಿಂದ) 0.42% ಇದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.